ರಾಜ್ಯದಲ್ಲಿ ಒಮಿಕ್ರಾನ್ ಆತಂಕ! ತಜ್ಞರು ಹೇಳಿದ್ದೇನು?

ಸೋಮವಾರ, 29 ನವೆಂಬರ್ 2021 (07:33 IST)
ಬೆಂಗಳೂರು : ಇಡೀ ಜಗತ್ತನ್ನೇ ಕಾಡಿದ, ಕಂಗೆಡಿಸಿದ, ಜನ ಜೀವನವನ್ನೇ ಬುಡಮೇಲಾಗಿಸಿದ ಕೊರೊನಾ ವೈರಸ್ ಅಟ್ಟಹಾಸದ ನೆನಪು ಇನ್ನೂ ಹಸಿ ಹಸಿಯಾಗಿಯೇ ಇದೆ.
ಕೊರೊನಾ ದಾಳಿಗೆ ಬಲಿಯಾದವರ ಮನೆ ಮಂದಿ ಇನ್ನೂ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. ಕೊರೊನಾ ಕೊಟ್ಟ ಹೊಡೆತದಿಂದ ಜನಸಾಮಾನ್ಯರು ಈಗಷ್ಟೇ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದ್ರೀಗ, ಕೊರೊನಾ ಮತ್ತೊಂದು ಅವತಾರ ತಾಳಿ ಜಗತ್ತನ್ನೇ ಕಪಿಮುಷ್ಠಿಯಲ್ಲಿಟ್ಟುಕೊಳ್ಳೋಕೆ ಹೊಂಚು ಹಾಕಿ ಕುಳಿತಿದೆ.
ಸದ್ಯ ಆಫ್ರಿಕಾ ದೇಶಗಳಲ್ಲಿ ಹರಡುತ್ತಿರೋ ಒಮಿಕ್ರಾನ್ ಎಲ್ಲಿ ಭಾರತಕ್ಕೂ ಕಾಲಿಟ್ಟು ಜೀವ ಹಿಂಡುತ್ತೋ ಅನ್ನೋ ಭೀತಿ ಶುರುವಾಗಿದೆ. ಅಲ್ಲದೆ ತಜ್ಞರು ಕೂಡ ಇದು ಭಾರಿ ಡೇಂಜರಸ್ ವೈರಸ್ ಅಂದಿರೋದು ಇನ್ನೂ ಆತಂಕಕ್ಕೆ ಕಾರಣವಾಗಿದೆ. ರಾಜ್ಯಕ್ಕೆ ಮೂರನೇ ಅಲೆಯ ಆತಂಕ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ