ಬುಚಾ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ ಭಾರತ!

ಗುರುವಾರ, 7 ಏಪ್ರಿಲ್ 2022 (06:16 IST)
ಕೀವ್ : ರಷ್ಯಾ-ಉಕ್ರೇನ್ ನಡ್ವೆ ಯುದ್ಧ ಮುಂದುವರೆದಿದೆ. ಉಕ್ರೇನ್ನ ಬುಚಾ ಪಟ್ಟಣದಲ್ಲಿ ನಡೆದ ನಾಗರಿಕರ ನರಮೇಧವನ್ನು ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಅತ್ಯುಗ್ರವಾಗಿ ಖಂಡಿಸಿದೆ.

ಭದ್ರತಾಮಂಡಳಿಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ತಿರುಮೂರ್ತಿ, ಉಕ್ರೇನ್ನಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಬುಚಾ ನರಮೇಧದ ದೃಶ್ಯಗಳು ಕಳವಳ ಮೂಡಿಸುತ್ತಿವೆ.

ಈ ಹತ್ಯಾಕಾಂಡವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಬಗ್ಗೆ ಸ್ವಾತಂತ್ರ್ಯ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸತ್ನಲ್ಲಿ ಮಾತಾಡಿದ ವಿದೇಶಾಂಗ ಮಂತ್ರಿ ಜೈಶಂಕರ್ ಕೂಡ, ಬುಚಾ ನರಮೇಧ ದಾರುಣ ಎಂದಿದ್ದಾರೆ. ಭಾರತ ಶಾಂತಿ ಬಯಸುತ್ತದೆ ಎಂದು ಜಗತ್ತಿಗೆ ಸ್ಪಷ್ಟಪಡಿಸಿದ್ದಾರೆ.

ಬುಚಾ ನರಮೇಧ ಖಂಡಿಸಿರುವ ಅಮೆರಿಕಾ, ರಷ್ಯಾದಲ್ಲಿ ಹೊಸ ಹೂಡಿಕೆಗಳ ಮೇಲೆ, ರಷ್ಯಾದ ಆರ್ಥಿಕ ಸಂಸ್ಥೆಗಳ ಮೇಲೆ, ಪುಟಿನ್ರ ಇಬ್ಬರು ಪುತ್ರಿಯರ ಮೇಲೆ, ಕ್ರೆಮ್ಲಿನ್ ಉನ್ನತಾಧಿಕಾರಿಗಳ ಮೇಲೆ, ಅವರ ಕುಟುಂಬಸ್ಥರ ಮೇಲೆ ಹೆಚ್ಚುವರಿ ದಿಗ್ಬಂಧನ ವಿಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ