ರಿಯಾಯಿತಿ ದರದಲ್ಲಿ ಕಚ್ಚಾ ತೈಲ

ಶನಿವಾರ, 2 ಏಪ್ರಿಲ್ 2022 (07:43 IST)
ನವದೆಹಲಿ : ಭಾರತದಲ್ಲಿ ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದೆ.

ಇದೇ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ರಷ್ಯಾ ಮುಂದಾಗಿದೆ.

ಯುದ್ಧಪೂರ್ವ ಬೆಲೆಯಲ್ಲಿ ಪ್ರತಿ ಬ್ಯಾರಲ್ಗೆ 35 ಡಾಲರ್ ರಿಯಾಯಿತಿಯಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ನೀಡಲು ರಷ್ಯಾ ಒಪ್ಪಿಕೊಂಡಿದೆ.  ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸಿ ರಷ್ಯಾದ ಮೇಲೆ ಯುಎಸ್, ಯುಕೆ ಮತ್ತು ಯೂರೋಪ್ ಒಕ್ಕೂಟ ಹಲವಾರು ನಿರ್ಬಂಧಗಳನ್ನು ವಿಧಿಸಿವೆ.

ಅಂತರರಾಷ್ಟ್ರೀಯ ಒತ್ತಡ ಮತ್ತು ನಿರ್ಬಂಧಗಳನ್ನು ಧಿಕ್ಕರಿಸುವ ಮತ್ತು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಬೆರಳೆಣಿಕೆಯ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.

ಫೆಬ್ರವರಿ ಅಂತ್ಯದಿಂದ ಕಚ್ಚಾ ತೈಲ ದರ 10 ಡಾಲರ್ಗಿಂತ ಹೆಚ್ಚಾಗಿದೆ. ಏಷ್ಯಾದಲ್ಲಿ ಎರಡನೇ ಅತಿದೊಡ್ಡ ತೈಲ ಆಮದುದಾರನಾಗಿರುವ ಭಾರತವು ಈ ವರ್ಷಕ್ಕೆ ಒಪ್ಪಂದ ಮಾಡಿಕೊಂಡಿರುವಂತೆ, 15 ಮಿಲಿಯನ್ ಬ್ಯಾರೆಲ್ಗಳನ್ನು ತೆಗೆದುಕೊಳ್ಳುತ್ತದೆ ಎಂದು ರಷ್ಯಾ ಖಚಿತಪಡಿಸಿಕೊಳ್ಳಲು ಬಯಸಿದೆ. ಈ ಸಂಬಂಧ ಎರಡೂ ರಾಷ್ಟ್ರಗಳು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ