ಭಾರತದ ಮೊದಲ ಕೋವಿಡ್ ಲಸಿಕೆಗೆ ಅನುಮೋದನೆ

ಬುಧವಾರ, 7 ಸೆಪ್ಟಂಬರ್ 2022 (07:06 IST)
ನವದೆಹಲಿ : ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧಿ ನಿಯಂತ್ರಕ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ.
 
ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಮೂಗಿನ ಮೂಲಕ ನೀಡುವ ಮೊದಲ ಕೋವಿಡ್-19 ಲಸಿಕೆ ಇದಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು, ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಇದು ದೊಡ್ಡ ಉತ್ತೇಜನ ಎಂದು ಬಣ್ಣಿಸಿದ್ದಾರೆ. 

ಈ ಹೆಜ್ಜೆಯು ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ