ನವದೆಹಲಿ : ಚಳಿಗಾಲದ ಅವಧಿಯಲ್ಲಿ ಮಂಜು ಮುಸುಕಿರುವುದರಿಂದ ಹಾಗೂ ಕಾರ್ಯಾಚರಣೆಯ ಕಾರಣಗಳಿಂದಾಗಿ ಭಾರತೀಯ ರೈಲ್ವೆ ಇಲಾಖೆ 740 ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.
ರದ್ದಾಗಲಿರುವ ರೈಲುಗಳು ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ಚಲಿಸುವ ರೈಲುಗಳಾಗಿವೆ.
2021ರ ಡಿಸೆಂಬರ್ನಲ್ಲಿ ಪಶ್ಚಿಮ ರೈಲ್ವೆ ವಿಭಾಗ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ 6 ಜೋಡಿ ವಿಶೇಷ ರೈಲುಗಳನ್ನು 3 ತಿಂಗಳ ಅವಧಿಗೆ ಅಂದರೆ 2022ರ ಫೆಬ್ರವರಿ ಅಂತ್ಯದವರೆಗೆ ರದ್ದುಗೊಳಿಸುವುದಾಗಿ ಘೋಷಿಸಿತ್ತು.
ಅದರ ಬೆನ್ನಲ್ಲೇ ರೈಲ್ವೆ ಇಲಾಖೆಯಿಂದ 740 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.