13 ಜಿಲ್ಲೆಗಳನ್ನು ಉದ್ಘಾಟಿಸಿದ ಜಗನ್

ಸೋಮವಾರ, 4 ಏಪ್ರಿಲ್ 2022 (14:56 IST)
ಅಮರಾವತಿ : ಆಂಧ್ರಪ್ರದೇಶ ಸೋಮವಾರ ರಾಜ್ಯದ ಹೊಸ ಆಡಳಿತಾತ್ಮಕ ನಕ್ಷೆಯನ್ನು ರಚಿಸಿದೆ.
 
13 ಹೊಸ ಜಿಲ್ಲೆಗಳ ರಚನೆಯೊಂದಿಗೆ ಆಂಧ್ರಪ್ರದೇಶದ ಒಟ್ಟು ಜಿಲ್ಲೆಗಳ ಸಂಖ್ಯೆ 26 ಕ್ಕೆ ಹೆಚ್ಚಿಸಲಾಗಿದೆ.
ಆಂಧ್ರಪ್ರದೇಶದ ಮುಖ್ಯ ಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಮವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ 13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದರು.

ಹೊಸ ಜಿಲ್ಲೆಗಳ ರಚನೆ ರಾಜ್ಯದ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಸುಲಭವಾಗಲು ನೂತನ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಜಗನ್ ಮೋಹನ್ ರೆಡ್ಡಿ 2019ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, 25 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. 

ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ