ಜಮ್ಮು-ಕಾಶ್ಮೀರದ ಶಾಲೆಗಳಿಗೆ ದೇಶಕ್ಕಾಗಿ ಬಲಿದಾನ !

ಶನಿವಾರ, 7 ಆಗಸ್ಟ್ 2021 (08:15 IST)
ಶ್ರೀನಗರ(ಆ. 07)  ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಯೋಧರನ್ನು ಪ್ರತಿದಿನ ಸ್ಮರಣೆ ಮಾಡಲೇಬೇಕು.  ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಜಮ್ಮು ಮತ್ತು ಕಾಶ್ಮೀರ ಮುಂದಾಗಿದ್ದು ಅಲ್ಲಿನ ಶಾಲಾ ಕಾಲೇಜಿಗೆ ಅವರ ಹೆಸರನ್ನು ಇಡಲು ಮುಂದಾಗಿದೆ.

ಪ್ರಾಣ ತ್ಯಾಗ ಮಾಡಿದ ಸೇನಾ ಅಧಿಕಾರಿಗಳು, ಪೊಲೀಸರು, ಸಿಆರ್ ಪಿಎಫ್ ಸಿಬ್ಬಂದಿಯ ಹೆಸರನ್ನು ಶಾಲಾ-ಕಾಲೇಜಿಗೆ ಇಡಲು ತೀರ್ಮಾನ  ಮಾಡಲಾಗಿದೆ.
ಜಮ್ಮು  ಮತ್ತು ಕಾಶ್ಮೀರದ ಡಿವಿಶನಲ್ ಕಮಿಷನರ್ ಅಲ್ಲಿನ ಡೆಪ್ಯೂಟಿ ಕಮಿಷನರ್ ಗೆ ಪತ್ರವೊಂದನ್ನು ಬರೆದಿದ್ದಾರೆ. ದೋಡಾ, ರಿಯಾಸಿ, ಪೂಂಚ್, ರಾಜೌರಿ, ಕಥುವಾ, ಸಾಂಬಾ, ರಂಬನ್, ಕಿಶ್ತ್ವಾರ್ ಮತ್ತು ಉದಂಪುರ್ ಜಿಲ್ಲೆಗಳಲ್ಲಿನ ಶಾಲೆಗಳ ಗುರುತು ಮಾಡಿ ಅವುಗಳಿಗೆ ಹುತಾತ್ಮರ ಹೆಸರು ಇಡುವ ಕೆಲಸ ಆರಂಭವಾಗಿದೆ.
ಪುಲ್ವಾಮಾ ದಾಳಿಯಂತಹ ಸಂದರ್ಭದಲ್ಲಿ, ನಕ್ಸಲ್ ಆಟಾಟೋಪಕ್ಕೆ ಯೋಧರು ಬಲಿಯಾಗಿದ್ದು ಅವರಿಗೆ ಈ ರೀತಿಯಲ್ಲಿ ಒಂದು ಗೌರವ ಸಲ್ಲಿಕೆ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ