ದಲೈಲಾಮಾ ಹತ್ಯೆಗೆ ಬೆಂಗಳೂರಿನಲ್ಲೇ ಸ್ಕೆಚ್ ಹಾಕಿದ್ದ ಉಗ್ರರು
ಜೆಎಂಬಿ ಉಗ್ರ ಮುನೀರ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬಿಹಾರ ರಾಜ್ಯಪಾಲರ ಜತೆಗೆ ದಲೈಲಾಮ ಭಾಗವಹಿಸಬೇಕಿದ್ದ ಕಾರ್ಯಕ್ರಮದಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಇದೀಗ ಈ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಉಗ್ರ ಮುನೀರ್ ಜತೆಗೆ, ಪೈಗಂಬರ್ ಶೇಖ್, ಮುನೀರ್, ನೂರ್ ಅಸ್ಲಾಂ ಮೊಮಿನ್ ಎಂಬ ಉಗ್ರರನ್ನೂ ಬಂಧಿಸಲಾಗಿದೆ. ಇದೀಗ ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.