ಸಿಎಂ ಎಚ್ ಡಿಕೆ ಭೇಟಿಗೆ ಆಗಮಿಸುತ್ತಿರುವ ಕಮಲ್ ಹಾಸನ್
ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ಗೆ ತಮ್ಮ ಪ್ರಮಾಣ ವಚನ ಸಮಾರಂಭಕ್ಕೂ ಖುದ್ದು ಎಚ್ ಡಿಕೆ ಆಹ್ವಾನ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಕಮಲ್ ಖುದ್ದಾಗಿ ಬಂದಿರಲಿಲ್ಲ.
ಇದೀಗ ರಾಜಕೀಯ ವಿಚಾರಗಳನ್ನು ಚರ್ಚಿಸಲೆಂದೇ ಕಮಲ್ ಬೆಂಗಳೂರಿಗೆ ಬರುತ್ತಿದ್ದಾರೆ. ‘ತಮಿಳು ನಾಡು ಮತ್ತು ಕರ್ನಾಟಕದ ಬಾಂಧವ್ಯ ಚೆನ್ನಾಗಿರಬೇಕು. ಆದರೆ ಕಾವೇರಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಸಿಎಂ ಎಚ್ ಡಿಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತ ಕಮಲ್ ಹಾಸನ್ ಕೂಡಾ ಈ ಭೇಟಿ ವೇಳೆ ಸಿನಿಮಾ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.