ಕೇಂದ್ರದಲ್ಲಿ ಸಚಿವರಾಗಲಿರುವ ಅದೃಷ್ಟವಂತ ಬಿಜೆಪಿ ಸಂಸದ ಯಾರು?

ಗುರುವಾರ, 15 ನವೆಂಬರ್ 2018 (09:00 IST)
ನವದೆಹಲಿ: ಸಚಿವ ಅನಂತ ಕುಮಾರ್ ಅಕಾಲಿಕ ನಿಧನದಿಂದಾಗಿ ಕೇಂದ್ರದಲ್ಲಿ ತೆರವಾಗಿರುವ ಸಚಿವ ಸ್ಥಾನಕ್ಕೆ ಮತ್ತೊಬ್ಬ ಕರ್ನಾಟಕದ ಸಂಸದರನ್ನೇ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಡುವೆ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ರಾಜ್ಯದ ಸಂಸದರಿಗೇ ಆ ಸ್ಥಾನ ನೀಡುವ ಮೂಲಕ ಇಲ್ಲಿ ಬಿಜೆಪಿ ಪ್ರಭಾವ ತಗ್ಗದಂತೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.

ಹೀಗಾಗಿ ರಾಜ್ಯದ ಪ್ರಭಾವಿ ಸಂಸದರೊಬ್ಬರಿಗೆ ಸಚಿವ ಸ್ಥಾನ ಗ್ಯಾರಂಟಿಯಾಗಿದೆ. ಇವರಲ್ಲಿ ಪ್ರಹ್ಲಾದ್ ಜೋಶಿ ಮತ್ತು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನಡುವೆ ಪೈಪೋಟಿಯಿದೆ ಎನ್ನಲಾಗಿದೆ. ಉಳಿದಂತೆ ಸುರೇಶ್ ಅಂಗಡಿ ಮತ್ತು ಶಿವಕುಮಾರ್ ಉದಾಸಿ ಅವರೂ ಪಟ್ಟಿಯಲ್ಲಿದ್ದಾರೆ. ಈಗಾಗಲೇ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸದಾನಂದ ಗೌಡ ಪಾಲಾಗಿದೆ. ಇದೀಗ ಇನ್ನೊಬ್ಬ ರಾಜ್ಯದ ಸಂಸದರಿಗೆ ಪ್ರಭಾವಿ ಖಾತೆ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್ ನದ್ದು. ಈ ಅದೃಷ್ಟದಾಟದಲ್ಲಿ ಯಾರಿಗೆ ಆ ಸ್ಥಾನ ಒಲಿಯುತ್ತದೆ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ