ಇಂದು ಸಂಜೆಯೇ ಕೇತುಗ್ರಸ್ತ ಸೂರ್ಯಗ್ರಹಣ

ಮಂಗಳವಾರ, 25 ಅಕ್ಟೋಬರ್ 2022 (06:15 IST)
ಬೆಂಗಳೂರು : ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಆದರೆ ಈ ಬಾರಿ ದೀಪಾವಳಿಯಂದೇ ಸೂರ್ಯಗ್ರಹಣ ಆಗ್ತಿರೋದು ವಿಶೇಷ.

ಹೀಗಾಗಿ ಸಹಜವಾಗೇ ಶುಭ- ಅಶುಭದ ಲೆಕ್ಕಾಚಾರವೂ ಶುರುವಾಗಿದೆ. ಒಂದೆಡೆ ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ.

ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಕುತೂಹಲದ ಜೊತೆಗೆ ಜನಸಾಮಾನ್ಯರಿಗೆ ಆತಂಕವೂ ಎದುರಾಗಿದೆ. ಇದಕ್ಕೆಲ್ಲಾ ಪರಿಹಾರವೂ ಇರಲಿದ್ದು, ಗ್ರಹಣ ಕಾಲದಲ್ಲಿ ಈ ಆಚರಣೆಗಳನ್ನ ಮಾಡಿ.

ಇದನ್ನ ಮಾಡ್ಬೇಡಿ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಇದೆಲ್ಲವನ್ನೂ ಹೊರತುಪಡಿಸಿದ್ರೆ ನಿಸರ್ಗದ ಸಹಜ ಪ್ರಕ್ರಿಯೆ ಗ್ರಹಣ ಕೌತುಕವನ್ನ ಕಣ್ತುಂಬಿಕೊಳ್ಳಲು ಆಸಕ್ತರು ತದಿಗಾಲಲ್ಲಿ ನಿಂತಿದ್ದಾರೆ.

 
ರಾಜ್ಯದಲ್ಲಿ ಗ್ರಹಣದ ಸಮಯ
* ಬೆಂಗಳೂರು- 10.9%.
ಗ್ರಹಣದ ಸಮಯ- ಸಂಜೆ 5.12-5.49
* ಮೈಸೂರು- 9.5%
ಗ್ರಹಣದ ಸಮಯ- ಸಂಜೆ 5.13 -5.51

* ಧಾರವಾಡ- 16.9%.
ಗ್ರಹಣದ ಸಮಯ- ಸಂಜೆ 5.01- 5.47
* ರಾಯಚೂರು- 16.67%
ಗ್ರಹಣದ ಸಮಯ- ಸಂಜೆ 5.01-5.47
* ಬಳ್ಳಾರಿ- 14.64%
ಗ್ರಹಣದ ಸಮಯ- ಸಂಜೆ 5.04-5.48. 

* ಬಾಗಲಕೋಟೆ- 17.33%.
ಗ್ರಹಣದ ಸಮಯ- ಸಂಜೆ 5.00-5.47
* ಮಂಗಳೂರು- 10.91%
ಗ್ರಹಣದ ಸಮಯ- ಸಂಜೆ 5.10 -5.50
* ಕಾರವಾರ- 15.15%
ಗ್ರಹಣದ ಸಮಯ-ಸಂಜೆ 5.03 -5.48

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ