ಕೊವ್ಯಾಕ್ಸಿನ್ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ:ಸ್ವಾಮಿನಾಥನ್

ಗುರುವಾರ, 4 ನವೆಂಬರ್ 2021 (12:30 IST)
ದೆಹಲಿ : ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಅನುಮೋದನೆಯನ್ನು ಪಡೆಯಲು ಕೊವ್ಯಾಕ್ಸಿನ್ ಯಾವುದೇ ರೀತಿಯಿಂದಲೂ ಹೆಚ್ಚು ಸಮಯ ತೆಗೆದುಕೊಂಡಿಲ್ಲ ಎಂದು ಮುಖ್ಯ ವಿಜ್ಞಾನಿ ಡಾ ಸೌಮ್ಯಾ ಸ್ವಾಮಿನಾಥನ್ ಬುಧವಾರ ಹೇಳಿದ್ದಾರೆ.
ಆರೋಗ್ಯ ಸಂಸ್ಥೆಯು ಭಾರತದ ಲಸಿಕೆ ಅನುಮೋದನೆಯನ್ನು ತಡೆಹಿಡಿದಿದೆ. ಅದೇ ವೇಳೆ ಚೀನಾದ ಲಸಿಕೆಗೆ ಅನುಮೋದನೆ ನೀಡಿದೆ ಎಂಬ ವಾದವನ್ನು ಡಾ ಸೌಮ್ಯಾ ತಳ್ಳಿ ಹಾಕಿದ್ದಾರೆ.
“ಕೊವ್ಯಾಕ್ಸಿನ್ 90 ರಿಂದ 100 ದಿನಗಳನ್ನು ತೆಗೆದುಕೊಂಡಿತು” ಎಂದು ಡಾ ಸ್ವಾಮಿನಾಥನ್ ಹೇಳಿದರು. ತುರ್ತು ಬಳಕೆಗಾಗಿ ಅನುಮತಿ ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಸಭೆ ನಡೆಸಿ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿದೆ ಎಂದು ಅವರು ಹೇಳಿದರು. “ಸಮಿತಿಯು ಇಂದು ಮತ್ತೆ ಭೇಟಿಯಾಯಿತು ಮತ್ತು ತುಂಬಾ ತೃಪ್ತವಾಗಿದೆ” ಎಂದು ಅವರು ಹೇಳಿದರು. ಅದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಇನ್ನೂ 13 ಲಸಿಕೆಗಳು ಕಾಯುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ