ಮಹಾರಾಷ್ಟ್ರ, ದಿಲ್ಲಿಯಲ್ಲಿ ಕೋವಿಡ್ ಭಾರೀ ಸ್ಫೋಟ!

ಭಾನುವಾರ, 2 ಜನವರಿ 2022 (15:52 IST)
2ನೇ ಅಲೆಯಲ್ಲಿ ಅತಿ ಹೆಚ್ಚು ಅನಾಹುತ ಸಂಭವಿಸಿದ್ದ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಹೊಸ ಕೋವಿಡ್ ಕೇಸುಗಳಲ್ಲಿ ಭಾರೀ ಏರಿಕೆಯಾಗಿದೆ.
 
ಮಹಾರಾಷ್ಟ್ರದಲ್ಲಿ ಶನಿವಾರ 9170 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಕೇಸಲ್ಲಿ ಶೇ.13ರಷ್ಟುಹೆಚ್ಚಾಗಿದೆ. ಜೊತೆಗೆ ಎರಡೇ ದಿನದಲ್ಲಿ ರಾಜ್ಯದಲ್ಲಿ ಹೊಸ ಕೇಸುಗಳು ದ್ವಿಗುಣವಾಗಿದೆ.

ಗುರುವರ ರಾಜ್ಯದಲ್ಲಿ 5368 ಕೇಸು ದಾಖಲಾಗಿತ್ತು. ಇನ್ನು ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ 6347 ಕೋವಿಡ್ ಕೇಸ್ಗಳು ಮುಂಬೈ ನಗರವೊಂದರಲ್ಲೇ ಪತ್ತೆಯಾಗಿವೆ.

ಇನ್ನು ದೆಹಲಿಯಲ್ಲಿ ಶನಿವಾರ 2716 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಸೋಂಕಿನ ಪ್ರಮಾಣ ಶೇ.51ರಷ್ಟುಹೆಚ್ಚಳವಾಗಿದೆ. ಶುಕ್ರವಾರ ಶೇ.2.4ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರ ಶನಿವಾರ 3.64ಕ್ಕೆ ಜಿಗಿದಿದೆ. 7 ತಿಂಗಳ ನಂತರ ಇದೇ ಮೊದಲ ಸಲಹ ದಿಲ್ಲಿಯಲ್ಲಿ ದಾಖಲಾದ ಸಾರ್ವಕಾಲಿಕ ದೈನಂದಿನ ಗರಿಷ್ಠ ಸೋಂಕು ಇದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ