ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕೆ ಕುಸಿತ : ಶಿಕ್ಷಣ ಇಲಾಖೆ

ಸೋಮವಾರ, 31 ಜುಲೈ 2023 (10:50 IST)
ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ 2022-23ನೇ ಸಾಲಿನ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆ ವರದಿ ಬಹಿರಂಗವಾಗಿದ್ದು, ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ತಿಳಿಸಿದೆ.
 
ಕೊರೊನಾ ನಂತರವೂ ಸರ್ಕಾರಿ ಶಾಲೆ ಮಕ್ಕಳ ಕಲಿಕಾ ಮಟ್ಟ ಸುಧಾರಣೆಯಾಗಿಲ್ಲ ಎಂಬುವುದು ಕಳವಳಕಾರಿ ಅಂಶವಾಗಿದೆ. ರಾಜ್ಯದ 2,618 ಸರ್ಕಾರಿ ಪ್ರಾಥಮಿಕ ಮತ್ತು 694 ಪ್ರೌಢಶಾಲೆಗಳ 3,5,8,9 ಮತ್ತು 10ನೇ ತರಗತಿಯ ಒಟ್ಟು 2,11,843 ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಒಳಪಟ್ಟಿದ್ದಾರೆ.

ಕಳೆದ ಜನವರಿಯಲ್ಲಿ ಸಮೀಕ್ಷೆ ನಡೆಸಿ ಕಲಿಕೆಯ ತುಲನಾತ್ಮಕ ವಿಶ್ಲೇಷಣೆ ನಡೆಸಲಾಗಿದೆ. 018-19ರಲ್ಲಿ ಕೊನೆಯದಾಗಿ ಕಲಿಕಾ ಸಾಧನೆಯ ಸಮೀಕ್ಷೆಯನ್ನು ನಡೆಸಲಾಗಿದ್ದು, 6ನೇ ತರಗತಿಯಲ್ಲಿದ್ದ ವಿದ್ಯಾರ್ಥಿ ಈಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. 2018-19ನೇ ಸಾಲಿನ ರಾಜ್ಯ ಕಲಿಕಾ ಸಾಧನೆಯ ಸಮೀಕ್ಷೆಗೆ ಹೋಲಿಸಿದರೆ, 2022-23ರಲ್ಲಿ ಈ ವಿದ್ಯಾರ್ಥಿಗಳ ಸಾಧನೆಯಿಂದ ಕಲಿಕೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ