ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯತೆ ಹೆಚ್ಚು!

ಮಂಗಳವಾರ, 11 ಜನವರಿ 2022 (08:12 IST)
ಇಡೀ ರಾಜ್ಯದಲ್ಲಿ ಕೊರೊನಾ ಹೇಗಿದೆ ಎಂದು ನೋಡಿದಾಗ ಬೆಂಗಳೂರಿನಲ್ಲಿಯೇ ಸೋಂಕು ಪ್ರಮಾಣ ಅಧಿಕವಾಗಿದೆ.
 
ಸೋಂಕಿತರ ಪ್ರಮಾಣ ಏರಿಕೆಯಾದರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದರೆ ಫೆಬ್ರವರಿ ತಿಂಗಳಲ್ಲಿ ನಿತ್ಯ 30-40 ಸಾವಿರ ಸೋಂಕಿತರು ಪತ್ತೆಯಾಗುವ ನಿರೀಕ್ಷೆ ಇದೆ.

ಏಕಾಏಕಿ ಹೆಲ್ತ್ ಎಮರ್ಜೆನ್ಸಿ ಬಂದಲ್ಲಿ, ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಬೀಳವ ಸಾಧ್ಯತೆ ಇದೆ. ಆಸ್ಪತ್ರೆಗೆ ದಾಖಲು, ಸಾವು ನೋವಿನ ಪ್ರಮಾಣ ಏರಿಕೆಯಾಗುವ ಆತಂಕ ಉಂಟಾಗಿದೆ.

ಸೋಂಕಿನ ಪ್ರಮಾಣ ಜೊತೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾದಲ್ಲಿ ಒಂದು ವಾರ ಲಾಕ್ಡೌನ್ ಖಚಿತ. ಪಾಸಿಟಿವಿಟಿ ರೇಟ್ ಏರಿಕೆ ಇರುವ ಜಿಲ್ಲೆಗಳಿಗೂ ಅನ್ವಯ ಆಗುವಂತೆ ಲಾಕ್ಡೌನ್ ಮಾಡುವ ಯೋಚನೆ ಇದೆ.

ಬೆಂಗಳೂರನ್ನ ಕೇಂದ್ರೀಕರಿಸಿ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜನವರಿ ಅಂತ್ಯದವರೆಗೆ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಮುಂದುವರೆಯುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ