ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಿಂದಾಗಿ ದೆಹಲಿಯಲ್ಲಿ 2,012.50 ರೂ. ಇದ್ದ ಪ್ರತೀ ಸಿಲಿಂಡರ್ಗಳ ಬೆಲೆ 1,976.50 ರೂ.ಗೆ ಇಳಿಕೆಯಾಗಿದೆ. ಇದು ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.
ಬೆಂಗಳೂರಿನಲ್ಲಿ 2,100.50 ರೂ. ಇದ್ದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2,063.50 ರೂ.ಗೆ ಇಳಿಕೆ ಆಗಿದೆ. ಕೋಲ್ಕತ್ತಾದಲ್ಲಿ 2,095.50 ರೂ. ಇದ್ದ ಸಿಲಿಂಡರ್ ಬೆಲೆ 2,132 ರೂ. ಇಳಿಕೆಯಾಗಿದೆ.