ಯಾವ ಪಕ್ಷದ ಎಷ್ಟು ಸದಸ್ಯರು ಸದನಕ್ಕೆ ಹಾಜರಾಗಿದ್ದಾರೆ ಗೊತ್ತಾ?!

ಶನಿವಾರ, 19 ಮೇ 2018 (11:47 IST)
ಬೆಂಗಳೂರು: ವಿಶ್ವಾಸ ಮತ ಯಾಚನೆ ಸಂಬಂಧ ಇಂದು ಮಹತ್ವದ ವಿಧಾನಸಭೆ ಕಲಾಪ ಆರಂಭವಾಗಿದ್ದು, ಎಲ್ಲಾ ಪಕ್ಷದ ಸದಸ್ಯರು ಹಾಜರಿದ್ದಾರೆ.

ಆದರೆ ಯಾವ ಪಕ್ಷದ ಸಂಖ್ಯೆ ಎಷ್ಟಿದೆ ಎಂದು ನೋಡೋಣ. ಕಾಂಗ್ರೆಸ್ ವಿಧಾನಸಭೆಯಲ್ಲಿ ಗೆದ್ದುಕೊಂಡಿದ್ದು 78 ಸ್ಥಾನಗಳನ್ನು. ಆದರೆ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಪ್ರತಾಪ್ ಗೌಡ ಸದ್ಯಕ್ಕೆ ಗೈರು ಹಾಜರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಂಖ್ಯೆ 76 ಕ್ಕೆ ಇಳಿಕೆಯಾಗಿದೆ.

ಅತ್ತ ಬಿಜೆಪಿಯ ಎಲ್ಲಾ ಸದಸ್ಯರು ಸದನದಲ್ಲಿ ಹಾಜರಿದ್ದಾರೆ. ಜೆಡಿಎಸ್ ನಲ್ಲಿ ರೇವಣ್ಣ ತಡವಾಗಿ ಆಗಮಿಸಿದರೂ ಉಳಿದೆಲ್ಲಾ ಸದಸ್ಯರೂ ಕಲಾಪಕ್ಕೆ ತಪ್ಪದೇ ಹಾಜರಾಗಿದ್ದಾರೆ. ಇದೀಗ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 110 ಸ್ಥಾನಗಳನ್ನು ದಾಟಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ