ಲೋಕಲ್ ಕಂಟೈನ್ಮೆಂಟ್ಗೆ ಮೋದಿ ಸಲಹೆ

ಗುರುವಾರ, 13 ಜನವರಿ 2022 (14:19 IST)
ನವದೆಹಲಿ : ರಾಜ್ಯಗಳ ಲೋಕಲ್ ಕಂಟೈನ್ಮೆಂಟ್ಗೆ ಅಧಿಕಾರ ನೀಡಲಾಗಿದ್ದು, ಲೋಕಲ್ ಕಂಟೈನ್ಮೆಂಟ್ನಿಂದಲೇ ಕೊರೊನಾ ತಡೆಗಟ್ಟಬೇಕಾಗಿದೆ.
 
ಸ್ಥಳೀಯ ಮಟ್ಟದಲ್ಲಿ ಸೋಂಕು ನಿಯಂತ್ರಣ ಮಾಡಿದರೆ ಸೋಂಕಿನ ವಿರುದ್ಧ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವರ್ಚುಯಲ್ ಮೂಲಕ ಸಭೆ ನಡೆಸಿ ಬಳಿಕ ಮಾತನಾಡಿದ ಮೋದಿ, ಕೊರೊನಾ 3ನೇ ಅಲೆ ಆರಂಭದಲ್ಲೇ ಎಚ್ಚರಿಕೆ ವಹಿಸಿದರೆ ಆಸ್ಪತ್ರೆ ಸೇರುವುದು ತಪ್ಪುತ್ತದೆ.

ನಾವು ದೇಶದಲ್ಲಿ ನಿಯಂತ್ರಣಕ್ಕೆ ಕಟ್ಟುನಿಟ್ಟಿಣ ಕ್ರಮ ಕೈಗೊಂಡಿದ್ದೇವೆ. ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ದೇಶದಲ್ಲಿ ಓಮಿಕ್ರಾನ್ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ