ಮೊಹಮ್ಮದ್ ನಲಪಾಡ್ ಪ್ರಕರಣಕ್ಕೆ ಮತ್ತೆ ಜೀವ
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಜಾಮೀನು ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬಂದಿದೆ. ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮಂಡಿಸಿದ್ದಾರೆ.
ನಲಪಾಡ್ ನಕ್ಕಲ್ ರಿಂಗ್ ನಿಂದ ಹೊಡೆದ ಬಗ್ಗೆ ಆರೋಪಪಟ್ಟಿಯಲ್ಲಿಲ್ಲ. ಇವರಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಇದು ಕೊಲೆ ಉದ್ದೇಶವಿಲ್ಲದ ಜಗಳವಷ್ಟೇ. ಮಾಧ್ಯಮಗಳು ವೈಭವೀಕರಿಸಿದ್ದರಿಂದ ಸಮಸ್ಯೆಯಾಯಿತು. ಶಾಸಕ ಹ್ಯಾರಿಸ್ ಗೆ ಚುನಾವಣೆ ಟಿಕೆಟ್ ಸಿಗುವುದೂ ಕಷ್ಟವಾಗಿತ್ತು ಎಂದು ವಕೀಲ ಉಸ್ಮಾನ್ ವಾದ ಮಂಡಿಸಿದ್ದಾರೆ. ಇದೀಗ ಆರೋಪಿ ಪರ ವಕೀಲರ ವಾದ ಮಂಡನೆ ಪೂರ್ಣವಾಗಿದ್ದು, ಇಂದು ಮತ್ತೊಮ್ಮೆ ವಿಚಾರಣೆ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.