ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಇಂದ್ರಾಣಿ ಮುಖರ್ಜಿ

ಶನಿವಾರ, 28 ಏಪ್ರಿಲ್ 2018 (06:31 IST)
ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾದ ಇಂದ್ರಾಣಿ ಮುಖರ್ಜಿ  ಮತ್ತು ಪೀಟರ್ ಮುಖರ್ಜಿ ತಮ್ಮ 16 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ನಿರ್ಧರಿಸಿದ್ದಾರೆ.

ಅರ್ಥರ್ ಜೈಲಿನಲ್ಲಿ ಕಳೆಯುತ್ತಿರುವ ಇಂದ್ರಾಣಿ ತಮ್ಮ ವಕೀಲರ ಮೂಲಕ ಪತಿ ಪೀಟರ್ ಮುಖರ್ಜಿಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ. ಕೊಲೆ ಪ್ರಕರಣದ ಸಂಬಂಧ ಇಬ್ಬರ ನಡುವೆ ವೈಮನಸ್ಯವೇರ್ಪಟ್ಟಿತ್ತು.

ಹಲವು ದಿನಗಳಿಂದ ಇವರ ನಡುವೆ ವಿಚ್ಛೇದನದ ಸುದ್ದಿ ಓಡಾಡುತ್ತಿತ್ತು. ಇದೀಗ ಅಧಿಕೃತವಾಗಿದೆ. ಇಬ್ಬರೂ ಅಪಾರ ಆಸ್ತಿ-ಪಾಸ್ತಿ ಹೊಂದಿದ್ದು, ಅದರ ವಿಲೇವಾರಿ ಕೋರ್ಟ್ ನಲ್ಲಿ ತೀರ್ಮಾನವಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ