ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್ಗಳನ್ನು ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದೆ.
ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು. ಮಾರ್ಚ್ 25ರಂದು ನಡೆದ ಬಜೆಟ್ನಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ತೀರ್ಮಾನ ಮಾಡಿದ್ದಾರೆ.
ನಗರಸಭೆ, ಸಮಾಜ ಹಾಗೂ ಜನಸಾಮಾನ್ಯರಿಗೆ ಶಾಂತಿ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ನಗರಸಭೆಯ ಈ ನಡೆಗೆ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ಕಾನೂನಿನ ಮಿತಿಯೊಳಗೆ ಇದ್ದರೆ ಯಾವುದೇ ತೊಂದರೆ ಇಲ್ಲ. ತೆರವು ಮಾಡುವುದಿಲ್ಲ. ಕಾನೂನಿನ ಮಿತಿಯಲ್ಲಿ ಇಲ್ಲದೆ, ಅಕ್ರಮವಾಗಿದ್ದರೆ ಮಾತ್ರ ತೆರವು ಎಂದು ನಗರಸಭೆ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.