ಬೂಸ್ಟರ್ ನಿರ್ಲಕ್ಷ್ಯ : ಇನ್ಮುಂದೆ ಫ್ರೀ ಲಸಿಕೆ ಸಿಗಲ್ಲ!

ಬುಧವಾರ, 5 ಅಕ್ಟೋಬರ್ 2022 (10:50 IST)
ಬೆಂಗಳೂರು : ಕೊರೊನಾ ಮಹಾಮಾರಿಗೆ ರಾಮಬಾಣವಾಗಿದ್ದ ಲಸಿಕೆಯ ಬಗ್ಗೆ ಅದೇಕೋ ಜನರಿಗೆ ಈಗ ತಾತ್ಸಾರ ಬಂದು ಬಿಟ್ಟಿದೆ.
 
ಮೊದಲೆರಡು ಅಲೆಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದ ಜನರು ಇದೀಗ ಬೂಸ್ಟರ್ ಡೋಸ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಸೆಪ್ಟೆಂಬರ್ 30 ರವರೆಗೆ ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ಸರ್ಕಾರ ನೀಡಿತು. ಆದರೆ, ಜನ ಮಾತ್ರ ನಮಗ್ಯಾಕೆ ಬೂಸ್ಟರ್ ಡೋಸ್ ಅಂತಾ ಕೂತಿದ್ದಾರೆ.

ಮಹಾಮಾರಿಗೆ ವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿಯಾಗಲು ಮೂರನೇ ಬೂಸ್ಟರ್ ಡೋಸ್ ಬೇಕು ಅಂತಾ ತಜ್ಞರು ಸಲಹೆ ಕೊಡ್ತಿದ್ರೂ ಈವರೆಗೂ ಕೇವಲ ಶೇ.30ರಷ್ಟು ಮಂದಿ ಮಾತ್ರ ಬೂಸ್ಟರ್ ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಮಯದಲ್ಲಿ ನೀಡಿದ ಉಚಿತ ವ್ಯಾಕ್ಸಿನ್ ಅನ್ನು ಶೇ.10ಕ್ಕಿಂತ ಕಡಿಮೆ ಜನರು ಪಡೆದಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ