ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ

ಭಾನುವಾರ, 11 ಸೆಪ್ಟಂಬರ್ 2022 (07:18 IST)
ಲಂಡನ್ : ರಾಣಿ 2ನೇ ಎಲಿಜಬೆತ್ ಸುದೀರ್ಘ 70 ವರ್ಷಗಳ ಆಳ್ವಿಕೆಯನ್ನು ಪೂರೈಸಿ ಗುರುವಾರ ನಿಧನ ಹೊಂದಿದರು.

ಇದೀಗ ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್ನನ್ನು ಅಧಿಕೃತವಾಗಿ ಬ್ರಿಟನ್ನ ರಾಜ ಎಂದು ಶನಿವಾರ ಘೋಷಿಸಲಾಗಿದೆ.

ಲಂಡನ್ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಇಂದು ಕಿಂಗ್ ಚಾರ್ಲ್ಸ್ ಅವರನ್ನು ಅಧಿಕೃತವಾಗಿ ಬ್ರಿಟನ್ನ ರಾಜ ಎಂದು ಘೋಷಿಸಲಾಗಿದೆ.

ಶುಕ್ರವಾರ ಹಿರಿಯ ರಾಜನಾಗಿ ಮೊದಲ ಬಾರಿ ಮಾಡಿದ ಭಾಷಣದಲ್ಲಿ, ಕಿಂಗ್ ಚಾರ್ಲ್ಸ್ ರಾಣಿ 2ನೇ ಎಲಿಜಬೆತ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಅವರು ನಿಷ್ಠೆ, ಗೌರವ ಮತ್ತು ಪ್ರೀತಿಯಿಂದ ತಮ್ಮ ಜೀವನಪರ್ಯಂತ ರಾಷ್ಟ್ರದ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ