ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು
96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ನಡೆಯಲು ಮತ್ತು ನಿಲ್ಲಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ಸದ್ಯ ರಾಣಿ ಆರೋಗ್ಯ ಸ್ಥಿರವಾಗಿದೆ, ಅವರು ಆರಾಮವಾಗಿದ್ದಾರೆ. ಹೀಗಾಗಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಸ್ಕಾಟ್ಲೆಂಡ್ನ ಬಾಲ್ಮೋರಲ್ ಕ್ಯಾಸಲ್ನಲ್ಲಿ ಉಳಿದಿದ್ದಾರೆ ಎಂದು ಅರಮನೆಯ ಮೂಲಗಳು ತಿಳಿಸಿದೆ.