ಓಲಾ, ಉಬರ್ ದರ ನಿಗದಿ ಸಭೆ

ಭಾನುವಾರ, 30 ಅಕ್ಟೋಬರ್ 2022 (08:32 IST)
ಬೆಂಗಳೂರು : ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಓಲಾ, ಉಬರ್, ರ್ಯಾಪಿಡೋ ಆಟೋಗಳ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.

15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಹೈಕೋರ್ಟ್ ಸೂಚಿಸಿದ್ದ ಬೆನ್ನಲ್ಲೇ ಸರ್ಕಾರ ಇಂದು ಓಲಾ, ಉಬರ್ ರ್ಯಾಪಿಡೋ ಹಾಗೂ ಆಟೋ ಯೂನಿಯನ್ ಸಭೆ ನಡೆಸಿದೆ.

ಸದ್ಯ ಸಾರಿಗೆ ಇಲಾಖೆ 2ಕೀ ಮೀಟರ್ಗೆ 30 ರೂ. ನಿಗದಿ ಮಾಡಿದ್ದು. ಮಿನಿಮಮ್ ದರ ಎರಡು ಕಿ.ಮೀಗೆ 50 ರೂ. ಹಾಗೂ ನಂತರದ ಪ್ರತೀ ಕಿ.ಮೀಗೆ 25 ರೂ. ಮಾಡಿ ಅಂತಾ ಓಲಾ, ಉಬರ್ ಕಂಪನಿಗಳು ಡಿಮ್ಯಾಂಡ್ ಮಾಡಿವೆ.

ಈ ಎಲ್ಲದರ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಸರ್ಕಾರ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ನವೆಂಬರ್ 7ಕ್ಕೆ ಕೋರ್ಟ್ಗೆ ಸಾರಿಗೆ ಇಲಾಖೆ ವರದಿ ಸಲ್ಲಿಕೆಯಾಗಬೇಕಿದ್ದು, ಕೋರ್ಟ್ ಬೆಳವಣಿಗೆ ನಂತರ ದರ ನಿಗದಿಯಾಗುವ ಸಾಧ್ಯತೆ ಇದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ