ಒಮಿಕ್ರಾನ್ ಸೋಂಕಿನಿಂದ ಉಸಿರಾಟಕ್ಕೆ ತೊಂದರೆ ಉಂಟಾಗುವ ಜತೆಗೆ ಹೊಟ್ಟೆಯೂ ಸಮಸ್ಯೆಗೆ ತುತ್ತಾಗುತ್ತದೆ ಎನ್ನುವುದು ತಿಳಿದುಬಂದಿದೆ.
ಹೊಟ್ಟೆಯಲ್ಲಿ ನೋವು, ಕಿರಿಕಿರಿ ಹಾಗೂ ನುಲಿದಂತೆ ಆಗುವುದು ಮತ್ತು ಹಸಿವಾಗದಿರುವ ಸಮಸ್ಯೆಯೂ ತಲೆದೋರುತ್ತದೆ.
ಹೊಟ್ಟೆಯ ಮೇಲೆ ಒಮಿಕ್ರಾನ್ ಸೋಂಕಿನ ಪ್ರಭಾವವಾದಾಗ ವಾಂತಿ ಬರಬಹುದು. ಹೊಟ್ಟೆಯಲ್ಲಿ ನುಲಿದಂತೆ ಆಗಬಹುದು, ಹೊಟ್ಟೆನೋವು ಸಹ ಕಾಣಿಸಿಕೊಳ್ಳಬಹುದು.
ಹೀಗಾಗಿ, ಜ್ವರ, ನೆಗಡಿ, ತಲೆನೋವು, ತಲೆಭಾರ ಯಾವುದೂ ಇಲ್ಲದೆ ಕೇವಲ ಹೊಟ್ಟೆಯೊಂದೇ ನೋಯುತ್ತಿದ್ದರೂ ನಿರ್ಲಕ್ಷ್ಯ ಮಾಡಬಾರದು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ರೂಪಾಂತರಿ ವೈರಸ್ ಪೀಡಿತರಾಗಿರುವ ಹಲವಾರು ಜನರಲ್ಲಿ ಕೇವಲ ಹೊಟ್ಟೆ ನೋವೊಂದೇ ಕಂಡುಬಂದಿದೆ.
ಅಷ್ಟೇ ಅಲ್ಲ, ಹೊಟ್ಟೆಯ ಸಮಸ್ಯೆ ತೀವ್ರವಾಗಿದೆ. ಎರಡೂ ಲಸಿಕೆಗಳನ್ನು ಪಡೆದುಕೊಂಡಿದ್ದರೂ ಈ ಲಕ್ಷಣಗಳು ಕಂಡುಬರುತ್ತವೆ ಎನ್ನುವುದು ವೈದ್ಯರ ಅಭಿಮತ. ಒಮಿಕ್ರಾನ್ ಸೋಂಕು ಬಂದಾಗ ಪದೇ ಪದೆ ಭೇದಿಯಾಗುವುದು ಸಾಮಾನ್ಯವಾಗಿದೆ.