ಒಮಿಕ್ರಾನ್ ರೂಪಾಂತರಿ: ಅಮೆರಿಕದಾದ್ಯಂತ ಹಾನಿ!

ಭಾನುವಾರ, 9 ಜನವರಿ 2022 (08:19 IST)
ವಾಷಿಂಗ್ಟನ್ : ಕೊವಿಡ್ -19 ರ ಒಮಿಕ್ರಾನ್ ರೂಪಾಂತರವು ಅಮೆರಿಕದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ.
 
ಏಕೆಂದರೆ ಇಲ್ಲಿ ಪ್ರತಿದಿನವೂ ಸೋಂಕಿನ ಸಂಖ್ಯೆಯಲ್ಲಿ ಅಪಾಯಕಾರಿ ಹೆಚ್ಚಳ ದಾಖಲಾಗುತ್ತಲೇ ಇದೆ.  ವರ್ಡೊಮೀಟರ್ ಡಾಟ್ ಕಾಮ್ ಹಂಚಿಕೊಂಡ ಮಾಹಿತಿಯ ಪ್ರಕಾರ ಅಮೆರಿಕದಲ್ಲಿ ಶನಿವಾರ 4,66,000 ಹೊಸ ಕೊರೊನಾವೈರಸ್  ಪ್ರಕರಣ ವರದಿ ಆಗಿದೆ.

ಇದು ಒಟ್ಟಾರೆ ಸೋಂಕಿತರಸಂಖ್ಯೆಯನ್ನು ಸುಮಾರು 6.1 ಕೋಟಿಗೆ ಏರಿಸಿದೆ. ಜನವರಿ 3 ರಂದು, ದೇಶವು ದೈನಂದಿನ ಸಂಖ್ಯೆಯಲ್ಲಿ 10,80,211 ಪ್ರಕರಣಗಳೊಂದಿಗೆ ಜಾಗತಿಕ ದಾಖಲೆಯನ್ನು ನಿರ್ಮಿಸಿತ್ತು.

ನವೆಂಬರ್ 2021 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯನ್ನು ಉಂಟುಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ