ಭಾರತದಲ್ಲಿ ನಿತ್ಯ ಎಷ್ಟು ಲಕ್ಷ ಹೊಸ ಕೊರೊನಾ ಕೇಸ್ ಗೊತ್ತ?

ಶನಿವಾರ, 8 ಜನವರಿ 2022 (09:37 IST)
ಒಮಿಕ್ರಾನ್ ನಿಂದ ಭಾರತದಲ್ಲಿ ಕೊರೊನಾದ ಮೂರನೇ ಅಲೆಯು ಜನವರಿ-ಅಂತ್ಯ ಮತ್ತು ಫೆಬ್ರವರಿಯಲ್ಲಿ ತುತ್ತತುದಿಗೆ ಮುಟ್ಟಬಹುದು.
 
ದಿನ ನಿತ್ಯದ ಕೊರೊನಾ ಕೇಸ್ ಗಳು 10 ಲಕ್ಷವನ್ನು ಮುಟ್ಟಬಹುದು ಎಂದು ಬೆಂಗಳೂರಿನ IISc ಹಾಗೂ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ ಟಿಟ್ಯೂಟ್ನ ಹೊಸ ಮಾಡೆಲಿಂಗ್ ಅಧ್ಯಯನವು ಭವಿಷ್ಯ ನುಡಿದಿದೆ.

ಒಮಿಕ್ರಾನ್ ಹರಡುವಿಕೆಯ ದರಗಳನ್ನು ಆಧರಿಸಿದ ಅಧ್ಯಯನವನ್ನು ಪ್ರೊಫೆಸರ್ ಶಿವ ಆತ್ರೇಯ, ಪ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಮತ್ತು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ ಟಿಟ್ಯೂಟ್ (ಐಎಸ್ಐ) ಬೆಂಗಳೂರಿನ ತಂಡವು ನಡೆಸಿತು.

ಭಾರತದಲ್ಲಿ ಕೊರೊನಾದ ಮೂರನೇ ಅಲೆಯ ಉತ್ತುಂಗವು ಜನವರಿಯ ಕೊನೆಯ ವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಪರಿಣಾಮ ಬೀರಬಹುದು ಎಂದು ಅದು ಹೇಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ