ಒಮಿಕ್ರಾನ್ ಉಪ ರೂಪಾಂತರಿ ಪತ್ತೆ!

ಬುಧವಾರ, 2 ಫೆಬ್ರವರಿ 2022 (13:13 IST)
ಬರ್ನ್ : ಓಮಿಕ್ರಾನ್ ಉಪ-ರೂಪಾಂತರಿ ಬಿಎ.2 ಇಲ್ಲಿಯವರೆಗೆ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ತಿಳಿಸಿದೆ.

ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಮೂಲ ಆವೃತ್ತಿಗಿಂತಲೂ ಬಿಎ.2 ಅತ್ಯಂತ ವೇಗದಲ್ಲಿ ಹರಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಈಗಾಗಲೇ ಇದು ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. 

10 ವಾರಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡಿರುವ ಕೊರೊನಾ ರೂಪಾಂತರಿಗಳಲ್ಲಿ ಮೊದಲನೆಯದ್ದು. ಕಳೆದ ತಿಂಗಳ ಕೋವಿಡ್ ಕೇಸ್ಗಳಲ್ಲಿ ಶೇ.93 ಕ್ಕಿಂತಲೂ ಹೆಚ್ಚಿನ ಪಾಲನ್ನು ಓಮಿಕ್ರಾನ್ ಹೊಂದಿದೆ.

ಅವುಗಳಲ್ಲಿ ಉಪ-ರೂಪಾಂತರಿಗಳಾಗಿ ಬಿಎ.1, ಬಿಎ.1.1, ಬಿಎ.2, ಹಾಗೂ ಬಿಎ.3ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಾಪ್ತಾಹಿಕ ಎಪಿಡೆಮಿಯೋಲಾಜಿಕಲ್ ವರದಿಯಲ್ಲಿ ತಿಳಿಸಿದೆ.

ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.96 ರಷ್ಟು ಪಾಲನ್ನು ಮೊದಲ ಬಾರಿಗೆ ಗುರುತಿಸಿದ ಆವೃತ್ತಿಗಳಾದ ಬಿಎ.1 ಹಾಗೂ ಬಿಎ.1.1ಗಳೇ ಹೊಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ