200ರ ಗಡಿದಾಟಿದ ಓಮಿಕ್ರಾನ್!

ಗುರುವಾರ, 23 ಡಿಸೆಂಬರ್ 2021 (06:17 IST)
ನವದೆಹಲಿ :  ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. 15 ರಾಜ್ಯಗಳಲ್ಲಿ 224ಕ್ಕೂ ಹೆಚ್ಚು ಪ್ರಕರಣಗಳು ವರದಿ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಿ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.

ದೆಹಲಿಯಲ್ಲಿ 57, ಮಹಾರಾಷ್ಟ್ರದಲ್ಲಿ 54, ತೆಲಂಗಾಣದಲ್ಲಿ 24, ಕರ್ನಾಟಕದಲ್ಲಿ 19, ರಾಜಸ್ತಾನದಲ್ಲಿ 18, ಕೇರಳದಲ್ಲಿ 15, ಗುಜರಾತ್ನಲ್ಲಿ 14 ಪ್ರಕರಣಗಳು ವರದಿ ಆಗಿವೆ. ಜಮ್ಮುಕಾಶ್ಮೀರದಲ್ಲಿ ಮೂರು ಓಮಿಕ್ರಾನ್ ಕೇಸ್ ಪತ್ತೆ ಆಗಿವೆ. 

ಈ ಮಧ್ಯೆ, ಬೂಸ್ಟರ್ ಡೋಸ್ ಯಾವತ್ತಿನಿಂದ ಕೊಡ್ತೀರಾ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ತುಂಬಾ ಮಂದಿಗೆ ದೇಶದಲ್ಲಿ ಲಸಿಕೆ ಸಿಕ್ಕಿಲ್ಲ. ಕೇವಲ ಶೇಕಡಾ 42 ಮಂದಿಗಷ್ಟೇ ಕಂಪ್ಲೀಟ್ ಡೋಸ್ ನೀಡಲಾಗಿದೆ ಅಷ್ಟೇ ಎಂಬುದನ್ನು ಟ್ವಿಟ್ಟರ್ನಲ್ಲಿ ನೆನಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ