ದ.ಆಫ್ರಿಕಾದಲ್ಲಿ ಟೀಂ ಇಂಡಿಯಾಗೆ ಸಕ್ಸಸ್ ಮಂತ್ರ ಹೇಳಿದ ಸಚಿನ್ ತೆಂಡುಲ್ಕರ್
ಸಂದರ್ಶನವೊಂದರಲ್ಲಿ ಮಾತನಾಡಿರುವ ಸಚಿನ್ ತೆಂಡುಲ್ಕರ್ ಇಲ್ಲಿ ಆಡುವಾಗ ಕ್ರಿಕೆಟಿಗರು ಮುಂಗಾಲಿನ ಚಲನೆ ಮುಖ್ಯವಾಗುತ್ತದೆ ಎಂದಿದ್ದಾರೆ.
ಫ್ರಂಟ್ ಫೂಟ್ ಡಿಫೆನ್ಸ್ ತುಂಬಾ ಮುಖ್ಯ. ನೀವು ಎಷ್ಟು ಚೆನ್ನಾಗಿ ಮುಂಗಾಲಿನ ಚಲನೆ ಮಾಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತತದೆ. ಮೊದಲ 25 ಓವರ್ ಗಳನ್ನು ಬ್ಯಾಟ್ಸ್ ಮನ್ ಇದಕ್ಕೇ ಪ್ರಾಶಸ್ತ್ಯ ನೀಡಬೇಕು. ನೀವು ಕೆಎಲ್ ರಾಹುಲ್, ರೋಹಿತ್ ಶರ್ಮಾ ಇಂಗ್ಲೆಂಡ್ ನಲ್ಲಿ ಯಶಸ್ಸು ಗಳಿಸಿರುವುದನ್ನು ನೋಡಿರುತ್ತೀರಿ. ಅಲ್ಲಿ ಅವರು ಫ್ರಂಟ್ ಫೂಟ್ ಅದ್ಭುತವಾಗಿ ಬಳಸಿದ್ದರು. ಹೀಗಾಗಿಯೇ ಅವರಿಗೆ ಅಲ್ಲಿ ರನ್ ಗಳಿಸಲು ಸಾಧ‍್ಯವಾಗಿತ್ತು. ಅದನ್ನೇ ಇಲ್ಲಿ ಪುನರಾವರ್ತಿಸಬೇಕು ಎಂದಿದ್ದಾರೆ.