ಪಾಕಿಸ್ತಾನ : ನಿಗೂಢ ಕಾಯಿಲೆಗೆ 18 ಸಾವು

ಶನಿವಾರ, 28 ಜನವರಿ 2023 (06:08 IST)
ಇಸ್ಲಾಮಾಬಾದ್ :  ಕೆಮಾರಿಯ ಮಾವಾಚ್ ಗೋಥ್ ಪ್ರದೇಶದಲ್ಲಿ 14 ಮಕ್ಕಳು ಸೇರಿದಂತೆ 18 ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ಶುಕ್ರವಾರ ದೃಢಪಡಿಸಿದ್ದಾರೆ.

ಸಾವುಗಳಿಗೆ ಕಾರಣ ಕಂಡುಹಿಡಿಯುವ ನಿಟ್ಟಿನಲ್ಲಿ ಆರೋಗ್ಯ ತಂಡವು ಕಾರ್ಯನಿರ್ವಹಿಸುತ್ತಿದೆ. ಈ ಕಾಯಿಲೆ ಸಮುದ್ರ ಅಥವಾ ನೀರಿಗೆ ಸಂಬಂಧಿಸಿದ್ದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. 

ಮೃತರು ತೀವ್ರ ಜ್ವರ, ಗಂಟಲು ಊತ ಮತ್ತು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕಳೆದ ಎರಡು ವಾರಗಳಿಂದ ಈ ಪ್ರದೇಶದಲ್ಲಿ ವಿಚಿತ್ರ ವಾಸನೆ ಹೊಮ್ಮುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ ಎಂದು ಜುಮಾನಿ ಹೇಳಿದ್ದಾರೆ.

ಸಿಂಧ್ ರಾಸಾಯನಿಕ ವಿಜ್ಞಾನಗಳ ಕೇಂದ್ರದ ಮುಖ್ಯಸ್ಥ ಇಕ್ಬಾಲ್ ಚೌಧರಿ ಅವರು ಕಾರ್ಖಾನೆಗಳಿಂದ ಸೋಯಾ ಬೀನ್ನ ಕೆಲವು ಮಾದರಿಗಳನ್ನು ಸಹ ಸಂಗ್ರಹಿಸಿದ್ದಾರೆ. ಸೋಯಾ ಅಲರ್ಜಿಯಿಂದ ಸಾವು ಸಂಭವಿಸಿರಬಹುದು ಎಂದು ಅವರು ಅಂದಾಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ