ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ!
ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಒಂದೇ ದಿನ ಡಾಲರ್ ಎದುರು 24 ರೂ. ಕುಸಿತ ಕಂಡಿದ್ದು 255 ರೂ.ಗೆ ತಲುಪಿದೆ. ಕಳೆದ ಜನವರಿಯಲ್ಲಿ ಡಾಲರ್ ಎದುರು 175 ರೂ.ನಷ್ಟಿತ್ತು.
ಇದೀಗ 255 ರೂ.ಗೆ ತಲುಪಿದೆ. ಈ ನಡುವೆ ಮಾರುಕಟ್ಟೆ ಶಕ್ತಿಗಳಿಗೆ ತಮ್ಮ ಕರೆನ್ಸಿ ದರವನ್ನು ನಿರ್ಧರಿಸಲು ಅವಕಾಶ ನೀಡುವಂತೆ ಪಾಕ್ ಸರ್ಕಾರಕ್ಕೆ ಷರತ್ತು ವಿಧಿಸಿದೆ. ಈ ಷರತ್ತನ್ನು ಪಾಕ್ ಸರ್ಕಾರ ಸಹ ಒಪ್ಪಿಕೊಂಡಿದೆ.