ಬೆಂಗಳೂರು : ಕೊರೊನಾ ಒಂದು ವಾರದಿಂದ ಜಾಸ್ತಿ ಆಗ್ತಿದೆ. ನಾಳೆ ಪ್ರಧಾನಿಗಳು ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಎಲ್ಲಾ ರಾಜ್ಯಗಳ ಸ್ಥಿತಿಗತಿ ಬಗ್ಗೆ ಅವಲೋಕನೆ ಮಾಡುತ್ತಾರೆ. ಕೊರೊನಾ 4ನೇ ಅಲೆ ತಡೆಗೆ ಮುನ್ನೆಚ್ಚರಿಕಾ ಕ್ರಮ ಹೇಗೆ ಮಾಡಬೇಕು ಅಂತ ನಾಳೆಯ ಸಭೆಯಲ್ಲಿ ಪಿಎಂ ಹೇಳ್ತಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಜಾಸ್ತಿ ಆಗಿರಲಿಲ್ಲ. ಅದಕ್ಕೆ ಲಸಿಕೆ ಅಭಿಯಾನ ಕಾರಣ. ರಾಜ್ಯದಲ್ಲಿ 10 ಕೋಟಿ ಲಸಿಕೆ ಕೊಟ್ಟಿದ್ದೇವೆ.
ಲಸಿಕೆ ತೆಗೆದುಕೊಂಡರೆ ಕೊರೊನಾ ಬರಲ್ಲ ಅಂತ ಅಲ್ಲ. ಆದರೆ ತೀವ್ರ ತರವಾದ ಸಮಸ್ಯೆ ಇರಲ್ಲ. ನಾಳೆ ಪ್ರಧಾನಿಗಳ ಸಭೆ ಬಳಿಕ ಪ್ರಧಾನಿಗಳು ನಿಡುವ ಸಲಹೆಗಳನ್ನ ರಾಜ್ಯದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಲಸಿಕೆ ತಗೊಂಡರೆ ಇನ್ಫೆಕ್ಷನ್ ಆಗಬಹುದು. ಅಷ್ಟೆ ದೊಡ್ಡ ಪ್ರಮಾಣದ ಸಮಸ್ಯೆ ಆಗಲ್ಲ. ಎರಡು ಡೋಸ್ ಲಸಿಕೆ ಜನರು ಕಡ್ಡಾಯವಾಗಿ ಪಡೆಯಬೇಕು. 3 ನೇ ಡೋಸ್ 55% ಮಾತ್ರ ಆಗಿದೆ. ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಬೇಕು.
4ನೇ ಅಲೆ ಬರೋವರೆಗೂ ಯಾರೂ ಕಾಯಬೇಡಿ. ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ರಾಜ್ಯದಲ್ಲಿ ಲಕ್ಷಾಂತರ ಡೋಸ್ ಲಸಿಕೆ ನಮ್ಮ ಬಳಿ ಇದೆ. ಲಸಿಕೆ ಕೊರತೆ ಇಲ್ಲ. ಜನರು ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಒಳಾಂಗಣದಲ್ಲಿ, ಜನರು ಇರೋ ಕಡೆ, ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಹೇಳಿದರು.