ಆಯುಷ್ಮಾನ ಭಾರತ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ಬುಧವಾರ, 15 ಆಗಸ್ಟ್ 2018 (08:38 IST)
ನವದೆಹಲಿ: 72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಬಹುನಿರೀಕ್ಷಿತ ಆಯುಷ್ಮಾನ್
ಭಾರತ್ ಆರೋಗ್ಯ ಯೋಜನೆ ಘೋಷಣೆ ಮಾಡಿದ್ದಾರೆ.


ಪ್ರಧಾನಿ ಮೋದಿಯ ಬಹುದಿನಗಳ ಕನಸು ಈ ಯೋಜನೆ. ಸ್ವಾತಂತ್ರ್ಯ ದಿನದಂದು ಈ ಘೋಷಣೆ ಮಾಡುತ್ತಾರೆಂದು ಮೊದಲೇ ಲೆಕ್ಕಾಚಾರ ಹಾಕಲಾಗಿತ್ತು. ಅದರಂತೇ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ದೇಶದ ಜನತೆಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ.

ಸೆ.25 ರಿಂದ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ 10 ಕೋಟಿ ಬಡ ಕುಟುಂಬದ 50 ಕೋಟಿ ಜನರಿಗೆ ಗಂಭೀರ ಖಾಯಿಲೆಗಳಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ