ಕೊಡಗಿನ ಸುಂಟಿಕೊಪ್ಪ ಬಗ್ಗೆ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಹೊಗಳಿದ್ದೇಕೆ ಗೊತ್ತಾ?
ಬುಧವಾರ, 22 ಆಗಸ್ಟ್ 2018 (09:04 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಹ ಪೀಡಿತ ಕೊಡಗಿನ ಬಗ್ಗೆ ಪ್ರಸ್ತಾಪಿಸುತ್ತಾ ಇಲ್ಲಿನ ಸುಂಟಿಕೊಪ್ಪದ ಬಗ್ಗೆ ವಿಶೇಷವಾಗಿ ಅಭಿನಂದಿಸಿದ್ದಾರೆ.
ಇದಕ್ಕೆ ಕಾರಣವೇನು ಗೊತ್ತಾ? ಪ್ರವಾಹದಿಂದ ತತ್ತರಿಸಿರುವ ಕೊಡಗಿನಲ್ಲಿ ಹಲವರು ನೆಲೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಆ ಸಂಕಷ್ಟದ ಸಮಯದಲ್ಲೂ ಸುಂಟಿಕೊಪ್ಪದಲ್ಲಿ ಜಾತಿ ಮತ ಮರೆತು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮೀಯರು ಜತೆಯಾಗಿ ತಮ್ಮ ಮಠ ಮಂದಿರಗಳಲ್ಲಿ ಸಂತ್ರಸ್ತರಿಗೆ ಉಳಕೊಳ್ಳಲು ವ್ಯವಸ್ಥೆ ಮಾಡಿದ್ದನ್ನು ರಾಹುಲ್ ಟ್ವಿಟರ್ ನಲ್ಲಿ ಅಭಿನಂದಿಸಿದ್ದಾರೆ.
‘ಪ್ರವಾಹ ಪೀಡಿತ ಕೊಡಗಿನಲ್ಲಿ ಹಲವರು ತಮ್ಮ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಆದರೆ ಈ ಸಂಕಷ್ಟದಲ್ಲೂ ಮರುಭೂಮಿಯ ಓಯಸಿಸ್ ನಂತೆ ಶಿವ, ರಾಮ, ಕ್ರಿಸ್ಟ್, ಅಲ್ಲಾಹ್ ಮತ್ತು ಬುದ್ಧ ಜತೆಯಾಗಿ ಸಂಕಷ್ಟಕ್ಕೀಡಾದವರಿಗೆ ನೆರವಾಗುತ್ತಿದ್ದಾರೆ. ಇದು ಭಾರತ ಅಂದರೆ’ ಎಂದು ರಾಹುಲ್ ಟ್ವೀಟ್ ಜತೆಗೆ ಅಲ್ಲಿನ ವಿಡಿಯೋವನ್ನೂ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.