ಗೃಹ ಸಚಿವ ರಾಮಲಿಂಗಾ ರೆಡ್ಡಿ-ಜಿ ಪರಮೇಶ್ವರ್ ನಡುವೆ ಕಿತ್ತಾಟ

ಗುರುವಾರ, 29 ಮಾರ್ಚ್ 2018 (10:20 IST)
ಬೆಂಗಳೂರು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಟಿಕೆಟ್ ಫೈನಲ್ ಮಾಡುವುದರಲ್ಲಿ ಬ್ಯುಸಿಯಾಗಿವೆ. ಇದರ ಜತೆಗೆ ಅಸಮಾಧಾನದ ಹೊಗೆಯೂ ಎದ್ದಿದೆ. ಟಿಕೆಟ್ ವಿಷಯಕ್ಕಾಗಿ ಗೃಹಸಚಿವ ರಾಮಲಿಂಗಾ ರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನಡುವೆ ಕಿತ್ತಾಟ ನಡೆದಿದೆ.

ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ಕುರಿತು ನಡೆದ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ಮತ್ತು ಪರಮೇಶ್ವರ್ ನಡುವೆ ಕಿತ್ತಾಟ ನಡೆದಿದೆ ಎನ್ನಲಾಗಿದೆ. ಪುತ್ರಿ ಸೌಮ್ಯ ರೆಡ್ಡಿಗೆ ಜಯನಗರ ಕ್ಷೇತ್ರದ ಟಿಕೆಟ್ ಕೇಳಿದ್ದ ರಾಮಲಿಂಗಾ ರೆಡ್ಡಿ ಮೇಲೆ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಎಲ್ಲಾ ಟಿಕೆಟ್ ಗಳನ್ನು ಅಪ್ಪ, ಮಕ್ಕಳಿಗೆ ನೀಡಿದರೆ ಹೇಗೆ ಎಂಬುದು ಪರಮೇಶ್ವರ್ ಅಸಮಾಧಾನಕ್ಕೆ ಕಾರಣ. ಇದರಿಂದ ಸಿಟ್ಟಿಗೆದ್ದ ರಾಮಲಿಂಗಾ ರೆಡ್ಡಿ ನನ್ನ ಮಗಳು ಎಂದು ಟಿಕೆಟ್ ನೀಡಬೇಡಿ. ಕಾಂಗ್ರೆಸ್ ಪಕ್ಷದ ಗೆಲ್ಲುವ  ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ ಟಿಕೆಟ್ ನೀಡಿ ಎಂದು ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರನ್ನೂ ಸಿಎಂ ಸಿದ್ದರಾಮಯ್ಯ ಸಮಾಧಾನಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ