ಬಿಗ್ ಟ್ವಿಸ್ಟ್! ವೀರಪ್ಪ ಮೊಯಿಲಿ ಟ್ವೀಟ್ ನ ನಿಜ ಕಾರಣ ಬಯಲಾಯ್ತು!
ನಿನ್ನೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ತಯಾರಿಸಲು ಏರ್ ಪೋರ್ಟ್ ಬಳಿ ಇರುವ ಮಹದೇವಪ್ಪ ಅವರಿಗೆ ಸೇರಿದ ರೆಸಾರ್ಟ್ ನಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಕಾರ್ಕಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊಯಿಲಿ ಪುತ್ರ ಹರ್ಷ ಮೊಯಿಲಿ ಹೆಸರು ಸೇರಿಸಲು ತೀವ್ರ ವಿರೋಧ ವ್ಯಕ್ತವಾಯಿತು.
ಆದರೆ ರಸ್ತೆ ಗುತ್ತಿಗೆದಾರ ಉದಯ್ ಕುಮಾರ್ ಎಂಬವರ ಹೆಸರು ಸೇರಿಸಲಾಗಿತ್ತು. ಇದಕ್ಕೆ ಕೋಪಗೊಂಡ ಮೊಯಿಲಿ ಮಹದೇವಪ್ಪನವರನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂದಿದ್ದರಂತೆ. ಇದೇ ಸಿಟ್ಟಿನಲ್ಲಿ ಮೊಯಿಲಿ ಟ್ವೀಟ್ ಮಾಡಿದ್ದರೆನ್ನಲಾಗಿದೆ. ಆದರೆ ವಿವಾದವಾಗುತ್ತಿದ್ದಂತೆ ಇದೀಗ ತಮ್ಮ ಖಾತೆ ಹ್ಯಾಕ್ ಆಗಿದೆ. ನಾನು ಟ್ವೀಟ್ ಮಾಡಿಲ್ಲ ಎನ್ನುತ್ತಿದ್ದಾರೆ. ಅದೇನೇ ಇದ್ದರೂ ಈ ಟ್ವೀಟ್ ಈಗಾಗಲೇ ಕಾಂಗ್ರೆಸ್ ಗೆ ಸಾಕಷ್ಟು ಹಾನಿ ಮಾಡಿದೆ.