ಟ್ವೀಟ್ ಮಾಡಿರೋದು ಮೊಯ್ಲಿಯಲ್ಲ, ಇದೆಲ್ಲಾ ಬಿಜೆಪಿಯವರೇ ಸೃಷ್ಟಿಸಿರುವುದು ಎಂದ ಪರಮೇಶ್ವರ್
ವೀರಪ್ಪ ಮೊಯಿಲಿ ತಮ್ಮ ಹೇಳಿಕೆಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅವರು ಟ್ವೀಟ್ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದಿಂದ ಪರಿಶೀಲನೆಯಾಗಲಿದೆ. ಯಾರಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಅಷ್ಟೇ ಅಲ್ಲ ಟ್ವೀಟ್ ಮಾಡಿರುವ ಮೊಯಿಲಿ ಪರ ಬ್ಯಾಟಿಂಗ್ ಮಾಡಿರುವ ಪರಮೇಶ್ವರ್, ಮೊಯಿಲಿ ಹೀಗೆಲ್ಲಾ ಮಾತನಾಡಿರುವ ಸಾಧ್ಯತೆಯಿಲ್ಲ. ಬಿಜೆಪಿ ನಾಯಕರದ್ದು ಈ ವಿಚಾರದಲ್ಲಿ ಅಸಂಬದ್ಧ ಹೇಳಿಕೆ. ಒಂದು ವೇಳೆ ಕಮಿಷನ್ ತೆಗೆದುಕೊಳ್ಳುತ್ತೆ ಎಂದರೆ ದಾಖಲೆ ಕೊಡಲಿ. ಇದರಲ್ಲಿ ಬಿಜೆಪಿಯವರದ್ದೇ ಕೈವಾಡವಿರುವಂತೆ ತೋರುತ್ತಿದೆ ಎಂದಿದ್ದಾರೆ.