ರಸ್ತೆಯ ಟೋಲ್‌ ಶುಲ್ಕ ಹೆಚ್ಚಳ?

ಗುರುವಾರ, 30 ಜೂನ್ 2022 (12:49 IST)
ಬೆಂಗಳೂರು : ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ (ಎನ್ಇಸಿಎಲ್) ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದೆ.

ಜು.1ರಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದ ಸಂಸ್ಥೆ, ತಾಂತ್ರಿಕ ಕಾರಣದಿಂದ ಟೋಲ್ ಫೀಸ್ ಹೆಚ್ಚಳವನ್ನು ಮುಂದೂಡಲಾಗಿದೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಮುಂದಿನ ಆದೇಶ ಹೊರಡಿಸಲಾಗುವುದು ಎಂದು ಎನ್ಇಸಿಎಲ್ ತಿಳಿಸಿದೆ. ಮೂಲಗಳ ಪ್ರಕಾರ ಶೇ.17ರಷ್ಟುಶುಲ್ಕವನ್ನು ಹೆಚ್ಚಳ ಮಾಡಲಾಗುತ್ತದೆ.

ನೈಸ್ ರಸ್ತೆಗೆ ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಐಸಿ)ನಿಂದ ಸಂಪರ್ಕ ಕಲ್ಪಿಸುವ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆಗಳಿಗೂ ಅನ್ವಯಿಸಲಿದೆ ಎಂದು ಎನ್ಇಸಿಎಲ್ ತಿಳಿಸಿದೆ.

ಬೇರೆ ಬೇರೆ ರಸ್ತೆ ನಿರ್ಮಾಣ ಸಂಸ್ಥೆಗಳು ತಮ್ಮ ರಸ್ತೆಗಳಲ್ಲಿನ ಟೋಲ್ ದರವನ್ನು ಪ್ರತಿ ವರ್ಷ ಹೆಚ್ಚಳ ಮಾಡಿದ್ದರೂ, ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಕಾರಣದಿಂದ ‘ನೈಸ್’ ಕಳೆದ ಐದು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಿರಲಿಲ್ಲ.

ಕೈಗೆಟಕುವ ದರದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಸೇವೆ ಒದಗಿಸುವುದು ನೈಸ್ ಸಂಸ್ಥೆಯ ಉದ್ದೇಶವಾಗಿದೆ ಎಂದು ಎನ್ಇಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ರಸ್ತೆ ಉದ್ದ (ಕಿ.ಮೀ.) ಕಾರು ಬಸ್ಸು ಟ್ರಕ್ ಎಲ್ಸಿವಿ ಎಂಎವಿ ಬೈಕ್
ಹೊಸೂರಿನಿಂದ ಬನ್ನೇರುಘಟ್ಟರಸ್ತೆ 8.74 45 125 85 45 90 20
ಬನ್ನೇರುಘಟ್ಟದಿಂದ ಕನಕಪುರ ರಸ್ತೆ 6.79 35 100 65 35 70 12
ಕನಕಪುರ ರಸ್ತೆಯಿಂದ ಕ್ಲೋವರ್ ಲೀಫ್ 4.36 25 65 40 25 40 8
ಕ್ಲೋವರ್ ಲೀಫ್ನಿಂದ ಮೈಸೂರು ರಸ್ತೆ 3.88 20 55 35 25 40 8
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ 9.55 45 135 90 55 95 20
ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ 7.48 40 105 70 40 75 12
ಲಿಂಕ್ ರಸ್ತೆ 8.10 50 130 90 50 105 18

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ