ಸಿಖ್ ಜನಾಂಗದವರ ಮಕ್ಕಳಿಗಾಗಿ ಪಾಕಿಸ್ತಾನದಲ್ಲಿ ಶಾಲೆ

ಗುರುವಾರ, 9 ಆಗಸ್ಟ್ 2018 (07:11 IST)
ಪೇಶಾವರ: ಪಾಕಿಸ್ತಾನದ ಖೈಬರ್‌ ಪಕ್ತನ್‌ಖ್ವಾ ಪ್ರಾಂತ್ಯದಲ್ಲಿ ನೆಲೆಸಿರುವ ಸಿಖ್‌ ಜನಾಂಗದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಪ್ರಾಥಮಿಕ ಶಾಲೆಯೊಂದನ್ನು ಹೊಂದಲಿದ್ದಾರೆ.


ಇತ್ತೀಚಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಯೊಂದನ್ನು ಸ್ಥಾಪಿಸುವಂತೆ ಪ್ರಾಂತೀಯ ಸರಕಾರಕ್ಕೆ ಡಬ್ಗರಿ ಪ್ರದೇಶದ ಮೋಹಲ್ಲಾ ಜೋಗನ್‌ ಶಾದಲ್ಲಿ ವಾಸಿಸುವ ಸಿಖ್‌ ಸಮುದಾಯ ಮನವಿ ಮಾಡಿಕೊಂಡಿತ್ತು.


ಮನವಿಯನ್ನು ಪುರಸ್ಕರಿಸಿರುವ ಸರಕಾರ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಶಾಲೆಯನ್ನು ತೆರೆಯಲು ತೀರ್ಮಾನಿಸಿದೆ. ಶಿಕ್ಷಣ ಇಲಾಖೆ ಈಗಾಗಲೇ ಈ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ