ಗೃಹಲಕ್ಷ್ಮಿ ಯೋಜನೆ ಅರ್ಜಿ ನೋಂದಣಿಗೆ ಸರ್ವರ್ ವಿಘ್ನ

ಶುಕ್ರವಾರ, 21 ಜುಲೈ 2023 (09:52 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಆರಂಭದಲ್ಲೇ ಸರ್ವರ್ ಸಮಸ್ಯೆ ವಿಘ್ನ ತಂದೊಡ್ಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಂತ್ರಿಕ ಸಮಸ್ಯೆ ಕಾಡಿದೆ. ಗೃಹಲಕ್ಷ್ಮಿಗೆ ನೋಂದಣಿ ಮಾಡಿಕೊಳ್ಳಲು ಮುಂದಾದ ಮಹಿಳೆಯರು ಸರ್ವರ್ ಸಮಸ್ಯೆಯಿಂದ ಪರದಾಡಿದ್ದಾರೆ.
 
ಹೌದು, ಮೊನ್ನೆ ಗೃಹಲಕ್ಷ್ಮಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಗುರುವಾರ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು, ಆರಂಭದಲ್ಲೇ ಸರ್ವರ್ ಸಮಸ್ಯೆ ಎದುರಾಗಿದೆ. ಜೊತೆಗೆ ಪಡಿತರ ಚೀಟಿಗೆ ನೀಡಿರುವ ಮೊಬೈಲ್ ಸಂಖ್ಯೆಗೆ ನೋಂದಣಿಯ ದಿನಾಂಕ ಸ್ಥಳದ ಸಂದೇಶ ಬರುತ್ತೆ. ಸಂದೇಶ ಬರದಿದ್ದರು, ಜನ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು ಪರದಾಡಿದ ಸ್ಥಿತಿ ಕಂಡುಬಂತು.

ಬೆಂಗಳೂರು ಅಷ್ಟೇ ಅಲ್ಲ, ದಾವಣಗೆರೆ, ಚಿಕ್ಕೋಡಿ, ಮಡಿಕೇರಿ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ನೋಂದಣಿ ಮಾಡಿಸಲು ಮಹಿಳೆಯರು ಪರದಾಡಿದ್ದಾರೆ. ಗ್ರಾಮ ಒನ್, ಕರ್ನಾಟಕ ಒನ್, ಸ್ಥಳೀಯ ಸಂಸ್ಥೆಗಳ ಬಳಿ ಬೆಳಗ್ಗೆಯಿಂದ ಸರತಿ ಸಾಲಲ್ಲಿ ನಿಂತಿದ್ದವರು ಸರ್ವರ್ ಪ್ರಾಬ್ಲಂನಿಂದ ನಿರಾಸೆಗೊಂಡ್ರು. ಬಳಿಕ ಮನೆಗೆ ವಾಪಸ್ ಆದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ