ಇಂದಿನಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಸಲ್ಲಿಕೆ ಅರಂಭ

ಗುರುವಾರ, 20 ಜುಲೈ 2023 (17:55 IST)
ಗೃಹಲಕ್ಷ್ಮಿ ಯೋಜನೆಗೆ‌ ಅರ್ಜಿ ಸಲ್ಲಿಸುವ ಮನದಂಡ ತಿಳಿಸಲಾಗಿದೆ.  ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಮನೆಯ ಯಜಮಾನಿಯ ಹೆಸರು ಇರಬೇಕು.ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು‌ ಮಳೆಯರು ಇದ್ದರೆ ಒಬ್ಬರಿಗೆ ಮಾತ್ರ ಅನ್ವಯವಾಗಲಿದೆ.ಅರ್ಜಿ ಅಹ್ವಾನಕ್ಕೆ ಆಧಾರ್ ಕಾರ್ಡ್ ನಂಬರ್ ಕಡ್ಡಾಯವಾಗಿದೆ.
 
ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು.ಅರ್ಜಿದಾರರು ಬೆಂಗಳೂರು ಒನ್ ಆಥವ ಆ್ಯಪ್ ಮೂಲಕವು ಅರ್ಜಿ ಸಲ್ಲಿಸಬಹುದು.ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.ಕುಟುಂಬ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರೆಗೆ ಪಾವತಿದಾರರಾಗಿರಬಾರದು.ಕುಟುಂಬದ ಯಜಮಾನಿ ಹಾಗೂ ಯಜಮಾನ ಜಿಎಸ್ ಟಿ ರಿರ್ಟನ್ಸ್ ಆಗಿರಬಾರದು. ಇನ್ನು ಒಂದಷ್ಟು ಮಾರ್ಗಸೂಚಿಗಳು ಬದಲಾಗುವ ಸಾಧ್ಯತೆ ಇದೆ
 
ನೋಂದಣಿಗೆ ದಾಖಲೆ ಏನೇನು ಬೇಕು?
 
ಪಡಿತರ ಚೀಟಿ ಸಂಖ್ಯೆಪತಿ ಪತ್ನಿ ಇಬ್ಬರ ಅಧಾರ್ ಕಾರ್ಡ್ ಜೆರಾಕ್ಸ್ ,ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಅಥವಾ ಬೇರೆ ಬ್ಯಾಂಕ್ ವರ್ಗಾವಣೆ ಬೇಕು ಅಂದರೂ ಅವಕಾಶ ಇದೆ.
 
ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್
 
ಸ್ಥಳೀಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಕೆ ಬಗ್ಗೆ ಡೌಟ್ ಇದ್ದರೆ 1902ಗೆ ಕರೆ ಮಾಡಿ ಅಥವಾ 8147500500 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ ಸರ್ಕಾರವೇ ನೇಮಿಸಿರುವ ಪ್ರತಿನಿಧಿಗಳು ನಿಮ್ಮ ಮನೆಯ ಬಳಿಯೇ ಬಂದು ನೋಂದಣಿ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ