ಮದ್ಯಪ್ರಿಯರಿಗೆ ಶಾಕ್!

ಮಂಗಳವಾರ, 28 ಸೆಪ್ಟಂಬರ್ 2021 (10:36 IST)
ನವದೆಹಲಿ, ಸೆ 28 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಹೊಸ ಅಬಕಾರಿ ನೀತಿಯೊಂದನ್ನು ಜಾರಿಗೆ ತಂದಿದ್ದು, ಅದರ ಅನುಸಾರವಾಗಿ ಅಕ್ಟೋಬರ್ 1ರಿಂದ ಖಾಸಗಿ ಮದ್ಯ ಅಂಗಡಿಗಳನ್ನು ತೆರೆಯುವಂತಿಲ್ಲ ಎಂಬ ಆದೇಶವನ್ನು ಹೊರಡಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 1ರಿಂದ 45 ದಿನಗಳ ಕಾಲ ಖಾಸಗಿ ಲಿಕ್ಕರ್ ಶಾಪ್, ಬಾರ್ಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ತಿಳಿಸಿದೆ.
ಹೊಸ ಅಬಕಾರಿ ನೀತಿಯನ್ನು ಜಾರಿ ಅನುಸಾರವಾಗಿ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್ಗಳನ್ನು ತೆರೆಯುವಂತಿಲ್ಲ. ಅ.1ರಿಂದ ನವೆಂಬರ್ 17ರವರೆಗೆ ದೆಹಲಿಯಲ್ಲಿ ಲಿಕ್ಕರ್ ಅಥವಾ ಮದ್ಯ ಮಾರಾಟ ಮಾಡುವಂತಿಲ್ಲ.
ಅಕ್ಟೋಬರ್ 1ರಿಂದ ಸರ್ಕಾರದ ವತಿಯಿಂದ ನಡೆಸುವ ಮದ್ಯದಂಗಡಿಗಳನ್ನು ಮಾತ್ರ ತೆರೆಯಲಾಗುತ್ತದೆ. ಖಾಸಗಿ ಮದ್ಯದಂಗಡಿಗಳು ನವೆಂಬರ್ 17ರವರೆಗೆ ಮುಚ್ಚಲಿವೆ. ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಚಿಲ್ಲರೆ ಮಾರಾಟ ಕೇಂದ್ರಗಳನ್ನು ತೆರೆಯಲು ಸರ್ಕಾರ ಬಿಡ್ ಆಹ್ವಾನಿಸಿ ಟೆಂಡರ್ ಕರೆದಿತ್ತು. ಈ ಬಗ್ಗೆ ಸೆ.15ರಂದು ಸರ್ಕಾರ ಘೋಷಣೆ ಮಾಡಿತ್ತು.
ದೆಹಲಿಯಲ್ಲಿ ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಘೋಷಿಸಿತ್ತು. ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್- 7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ಪರವಾನಗಿಗಳಿಗೆ ಟೆಂಡರ್ ನೀಡಿತ್ತು.
ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮುಂತಾದ ರಸ್ತೆಗಳಲ್ಲಿ ತೆರೆಯಬಹುದು.
ಖಾಸಗಿ ಲಿಕ್ಕರ್ ಶಾಪ್ಗಳು ಹೊಸತಾಗಿ ಮದ್ಯ ಶೇಖರಣೆ ಮಾಡುತ್ತಿಲ್ಲ, ಇದರಿಂದ ಈಗಾಗಲೇ ಕೆಲವು ಬಾರ್ ಹಾಗೂ ಲಿಕ್ಕರ್ ಶಾಪ್ಗಳಲ್ಲಿ ಆಲ್ಕೋಹಾಲ್ ಅಭಾವ ಕಂಡುಬರುತ್ತಿದೆ. ಖಾಸಗಿ ಲಿಕ್ಕರ್ ಶಾಪ್ಗಳಲ್ಲಿ ಬಹುತೇಕ ಅಂಗಡಿಗಳು ಶಾಶ್ವತವಾಗಿ ಮುಚ್ಚಲಿವೆ.
ಸದ್ಯಕ್ಕೆ ದೆಹಲಿಯಲ್ಲಿ 849 ಮದ್ಯದಂಗಡಿಗಳಿದ್ದು, ಅವುಗಳಲ್ಲಿ 276 ಖಾಸಗಿಯಾಗಿ ಲಿಕ್ಕರ್ ಶಾಪ್ಗಳಾಗಿವೆ. ಬಾಕಿ ಮದ್ಯದಂಗಡಿಗಳನ್ನು ದೆಹಲಿ ಸರ್ಕಾರದ ಏಜೆನ್ಸಿಗಳು ನಡೆಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ