ಸೋಂಕು ಹೆಚ್ಚಾಗುವ ಸಾಧ್ಯತೆ: 2 ಲಕ್ಷ ವೆಂಟಿಲೇಟರ್ ಹಾಸಿಗೆ ಸಿದ್ದಪಡಿಸಿದ ದೆಹಲಿ ಸರ್ಕಾರ

ಮಂಗಳವಾರ, 14 ಸೆಪ್ಟಂಬರ್ 2021 (07:32 IST)
ದೆಹಲಿ ಸರ್ಕಾರವು ನಡೆಸಿದ ಸಮೀಕ್ಷೆಯಲ್ಲಿ 23% ಸೋಂಕಿತರು ಐಸಿಯು ಆಸ್ಪತ್ರೆಗೆ ದಾಖಲಾಗುವ ನಿರೀಕ್ಷೆಯಲ್ಲಿದ್ದು, ಹಿಂದಿನ ಅಲೆಯಲ್ಲಿ ಈ ರೇಟಿಂಗ್ 20% ರಷ್ಟಿತ್ತು. "ಮೊದಲು, ಇದು 20% ಆಗಿತ್ತು ಆದರೆ ಆಗ ಎಲ್ಲರೂ ಐಸಿಯುನಲ್ಲಿ ಇರಲಿಲ್ಲ. ಇದು ಡೆಲ್ಟಾದಂತಹ ರೂಪಾಂತರ ಆಗಿದ್ದರೆ ಎನ್ನುವ ಅನುಮಾನ.

ಹಬ್ಬದ  ನಂತರ ಕೋವಿಡ್ -19 ಪ್ರಕರಣಗಳ ಏರಿಕೆಯಾಗಬಹುದು ಎಂದು ನಿರೀಕ್ಷಿಸಿ, ದೆಹಲಿ ಸರ್ಕಾರವು ತನ್ನ ಸಿದ್ಧತೆಯ ಭಾಗವಾಗಿ ಐಸಿಯುಗಳಲ್ಲಿ ವೆಂಟಿಲೇಟರ್ಗಳೊಂದಿಗೆ ಎರಡು ಲಕ್ಷ ಹಾಸಿಗೆಗಳನ್ನು ಮತ್ತು ಹೆಚ್ಚುವರಿ 40,000 ಹಾಸಿಗೆಗಳನ್ನು ತಯಾರು ಮಾಡಿಟ್ಟುಕೊಂಡಿದೆ. ಎರಡು ಲಕ್ಷ ಬೆಡ್ಗಳಲ್ಲಿ, 50% ವೆಂಟಿಲೇಟರ್ ಹೊಂದಿದ ಹಾಸಿಗೆಗಳನ್ನು ಈಗಾಗಲೇ ಸನ್ನದ್ದವಾಗಿ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ದೆಹಲಿಯಲ್ಲಿ ಎರಡನೇ ಕೋವಿಡ್ -19 ಅಲೆಯ ಸಮಯದಲ್ಲಿ ಒಂದಾದ ಮೇಲೆ ಒಂದರಂತೆ ನಡೆದ ಘೋರ ದೃಶ್ಯಗಳ ನಂತರ, ದುರಂತದ ಪುನರಾವರ್ತನೆಯನ್ನು ತಡೆಯಲು ರೋಗಿಗಳಿಗೆ ಉತ್ತಮ ವ್ಯವಸ್ಥೆಗಾಗಿ ಸರ್ಕಾರ ಸಜ್ಜಾಗಿದೆ ಎಂದು ಹೇಳಲಾಗಿದೆ.
ಎರಡನೇ ಅಲೆಯ ಸಮಯದಲ್ಲಿ ಮತ್ತು ನಂತರ ನಡೆಸಿದ ಅಧ್ಯಯನದ ಆಧಾರದ ಮೇಲೆ 23% ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದಾಗ್ಯೂ, ವೈರಸ್ನ ಡೆಲ್ಟಾ ರೂಪಾಂತರದ ಹೆಚ್ಚಿಗೆ ಹರಡುತ್ತಿರುವ ಸ್ವಭಾವವನ್ನು ಗಮನಿಸಿದರೆ ಸೋಂಕಿನ ಪ್ರಮಾಣ ಸಾಕಷ್ಟು ಅಧಿಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
"ಆರೋಗ್ಯ ರಕ್ಷಣೆಯ ಮೂಲಸೌಕರ್ಯದ ಅವಶ್ಯಕತೆಗಾಗಿ ಮೆಟ್ರಿಕ್ ಎರಡನೇ ಅಲೆಯ ವೇಳೆ ಉಂಟಾದ ಆಸ್ಪತ್ರೆ ಪ್ರವೇಶ ದರವನ್ನು ಆಧರಿಸಿ ಈ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಿಂದಿನ ಬಾರಿ ಸೋಂಕು ಉಲ್ಬಣಗೊಳ್ಳುವಿಕೆಯ ಸಮಯದಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ಹೆಚ್ಚಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರತಿ ಜಿಲ್ಲಾ ಆಸ್ಪತ್ರೆಯು ಕನಿಷ್ಠ ಐದು ಹೆಚ್ಚು ವೆಂಟಿಲೇಟರ್ಗಳನ್ನು ಈ ಬಾರಿ ಪಡೆದುಕೊಳ್ಳುತ್ತವೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಿತರಣೆಯನ್ನು ಆರಂಭಿಸಲಾಗಿದೆ "ಎಂದು ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ