ತಾಜ್ ಮಹಲ್ ಆಫ್‌ಲೈನ್‌ ಟಿಕೆಟ್ ಬಂದ್!

ಬುಧವಾರ, 5 ಜನವರಿ 2022 (18:48 IST)
ಭಾರತದಲ್ಲೀಗ ಮತ್ತೆ ಮಹಾಮಾರಿ ಅಬ್ಬರಿಸುತ್ತಿದೆ. ಎಲ್ಲೆಡೆ ರೂಪಾಂತರಿ  ಕೊರೊನಾದ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.
 
ಹಲವು ರಾಜ್ಯಗಳಲ್ಲಿ ಈಗಾಗ್ಲೇ ನೈಟ್ ಕರ್ಪ್ಯೂ , ಸಮಾರಂಭಗಳಿಗೆ ಸೀಮಿತಾವಕಾಶ, ಶಾಲೆ ಬಂದ್ , ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನಿಷೇಧ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬಂದಿವೆ.

ಕೊರೊನಾ ಭಯ ಮರೆತು ಜನ ಟ್ರಿಪ್, ಅಲ್ಲಿ-ಇಲ್ಲಿ ಸುತ್ತಾಡ್ತಿದ್ರು ಆದ್ರೆ ಇದೀಗ ಅದೆಲ್ಲದಕ್ಕೂ ಬ್ರೇಕ್ ಬೀಳೋ ಟೈಮ್ ಬಂದಿದೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ವಿಶ್ವ ಪ್ರಸಿದ್ಧಿ ತಾಜ್ ಮಹಲ್ಗೂ ಈಗ ಕೆಲವು ನಿರ್ಬಂಧ  ಹಾಕಲಾಗಿದೆ.

ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧಿ ತಾಜ್ ಮಹಲ್ ಆಡಳಿತ ಮಂದಿ ಕಟ್ಟೆಚ್ಚರ ವಹಿಸಿದೆ. ತಾಜ್ ಮಹಲ್ಗೆ ಪ್ರತಿದಿನ ಸಾವಿರಾರುದೇಶೀಯ, ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು.

ಹೀಗಾಗಿ ಕೋವಿಡ್-19 ಹೆಚ್ಚುತ್ತಿದಂತೆ ಎಚ್ಚೆತ್ತ ತಾಜ್ ಆಡಳಿತ ವರ್ಗ ಆಫ್ಲೈನ್ ಟಿಕೆಟ್ ಕೌಂಟರ್ ಅನ್ನು ಬಂದ್ ಮಾಡಿದೆ. ಸ್ಮಾರಕಕ್ಕೆ ಭೇಟಿ ನೀಡಲು ಪ್ರವಾಸಿಗರು ಈಗ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಿಕೊಂಡು ಭೇಟಿನೀಡಬೇಕು .

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ