ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ !

ಬುಧವಾರ, 22 ಮಾರ್ಚ್ 2023 (08:33 IST)
ಬೆಂಗಳೂರು : ನಾಡಿನಾದ್ಯಂತ ಯುಗಾದಿ ಸಂಭ್ರಮ ಮನೆ ಮಾಡಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಲ್ಲಿದ್ದ ಸಿಟಿಜನ ಹೂವು, ಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಜೋಶ್ನಲ್ಲಿ ಮಾರುಕಟ್ಟೆಗೆ ಹೋದ ಜನರಿಗೆ ಬೆಲೆ ಏರಿಕೆ ಶಾಕ್ ತಟ್ಟುತ್ತಿದೆ.

ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದರು. ಹೊಸ ದಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿಯು ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ.

ನಗರದ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಗಾಂಧಿ ಬಜಾರ್, ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಜೋಶ್ನಲ್ಲಿದ್ದ ಜನಕ್ಕೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ