ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ಸಂಚಾರ ದಟ್ಟನೆ. ಪೀಕ್ ಅವರ್ಸ್ ನಲ್ಲಂತೂ ಹೇಳೋದೆ ಬೇಡ. ಅದ್ರಲ್ಲೂ ಬೆಂಗಳೂರಿನ ಅರ್ಧ ಟ್ರಾಫಿಕ್‌ಗೆ ಈ ಮಾರುಕಟ್ಟೆಯೇ ಕಾರಣವಂತೆ. ಹೌದು, ಯಶವಂತಪುರ APMC ಮಾರ್ಕೆಟ್ ಗೆ ಎಂಟ್ರಿಯಾಗುವ ಸಾವಿರಾರು ಲಾರಿಗಳು ಟ್ರಾಫಿಕ್ ಸಮಸ್ಯೆಯನ್ನ ತಂದೊಡ್ಡುತ್ತಿದ್ಯಂತೆ. ಇದಕ್ಕೆ ಪರಿಹಾರ ಎಂಬಂತೆ ಈಗ APMC ಮಾರ್ಕೆಟ್ ಬೇರೆ ಕಡೆಗೆ ಶಿಫ್ಟ್ ಮಾಡಲಾಗ್ತಿದೆ.
ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲ, ಪರರಾಜ್ಯಗಳಿಂದ ಬರೋ ಸಾವಿರಾರು ಲಾರಿಗಳಿಗೆ ಇದು ಆಶ್ರಯದಾಣವಾಗಿದೆ.ಅಷ್ಟೇ ಅಲ್ಲ, ಲಕ್ಷಾಂತರ ವ್ಯಾಪಾರಿಗಳ ಜೀವನ ಇಲ್ಲಿಯೇ ಅಡಗಿದೆ. ಇಂತರ ಪ್ರಮುಖ ಮಾರುಕಟ್ಟೆಯನ್ನು ಆದಷ್ಟು ಬೇಗ ಶಿಫ್ಟ್ ಮಾಡುವಂತೆ ಸರ್ಕಾರ ಸೂಚಿಸಿದೆ. ನಗರದ ಟ್ರಾಫಿಕ್‌ಗೆ ಪರ್ಯಾಯ ಹುಡುಕೋ ನಿಟ್ಟಿನಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಅನ್ನೋದು ಸರ್ಕಾರದ ಅಭಿಪ್ರಾಯವೂ ಆಗಿದೆ.
ಇನ್ನು ಯಶವಂತಪುರದಿಂದ ದಾಸನಪುರಕ್ಕೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ನಿತ್ಯ 500ಕ್ಕೂ ಹೆಚ್ಚು ಲಾರಿಗಳು ಯಶವಂತಪುರ APMCಗೆ ಪೀಕ್ ಅವರ್ಸ್ ನಲ್ಲಿ ಪ್ರವೇಶ ವೇಳೆ ಮಾಡುತ್ತಿದ್ಯಂತೆ. ಸಾಲುಸಾಲಾಗಿ ಲಾರಿಗಳು ನಿಲ್ಲುವುದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ ಅಂತ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಕ್ಕಪಕ್ಕದ ಸ್ಕೂಲ್, ಆಸ್ಪತ್ರೆ, ಕಾರ್ಖಾನೆಗಳು, ಪೊಲೀಸ್ ಠಾಣೆಯಿಂದಲೂ ದೂರು ನೀಡಲಾಗಿದ್ಯಂತೆ.
ಗೊರಗುಂಟೆಪಾಳ್ಯ, ಯಶವಂತಪುರ, ಇಸ್ಕಾನ್ ಜಂಕ್ಷನ್, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳದ ಕಡೆಗೆ ಲಾರಿಗಳು ಎಂಟ್ರಿ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈರುಳ್ಳಿ, ಆಲೂಗಡ್ಡೆ, ಶುಂಠಿ ಪದಾರ್ಥಗಳು ಯಶವಂತಪುರದಿಂದ ಅತೀ ಹೆಚ್ಚಾಗಿ ತಮಿಳುನಾಡಿಗೆ ಸರಬರಾಜು ಆಗುತ್ತಿದೆ. ಈ ವೇಳೆ ಕೋರಮಂಗಲ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಕಡೆ ಭಾರೀ ಟ್ರಾಫಿಕ್ ಸಂಭವಿಸುತ್ತಿದೆ. ಹೀಗಾಗಿ ಯಶವಂತಪುರದಿಂದ 10 ಕಿ.ಲೋ ಮೀಟರ್ ದೂರದಲ್ಲಿರುವ ದಾಸನಪುರಕ್ಕೆ ಮಾರ್ಕೆಟ್ ಶಿಫ್ಟ್ ಸೂಚನೆ ನೀಡಲಾಗಿದೆ.
ಸದ್ಯ ದಾಸನಪುರದಿಂದ ನೈಸ್ ರಸ್ತೆ ಮೂಲಕ ತಮಿಳುನಾಡು ತಲುಪಲು ಪ್ಲ್ಯಾನ್ ಮಾಡಲಾಗಿದೆ. ಇದರಿಂದ ಲಾರಿಗಳು ನಗರಕ್ಕೆ ಎಂಟ್ರಿಯಾಗಂತೆ ರಿಂಗ್ ರಸ್ತೆ ಮೂಲಕ ತಲುಪಲು ಅನುಕೂಲ ಆಗುತ್ತೆ ಕೂಡಲೇ ಸ್ಥಳಾಂತರಕ್ಕೆ ಮತ್ತೊಮ್ಮೆ ಸೂಚನೆ ನೀಡಲಾಗುವುದು ಅಂತ ಸಂಭಂದ ಪಟ್ಟ ಅದಿಕಾರಿಗಳೂ ತಿಳಿಸಿದ್ದಾರೆ.ದಾಸನಪುರದಿಂದ ನೈಸ್ ರಸ್ತೆ ಮೂಲಕ ತಮಿಳುನಾಡು ತಲುಪಲು ಪ್ಲ್ಯಾನ್ ಮಾಡಲಾಗಿದೆ. ಇದರಿಂದ ಲಾರಿಗಳು ನಗರಕ್ಕೆ ಎಂಟ್ರಿಯಾಗಂತೆ ರಿಂಗ್ ರಸ್ತೆ ಮೂಲಕ ತಲುಪಲು ಅನುಕೂಲ ಆಗುತ್ತೆ ಕೂಡಲೇ ಸ್ಥಳಾಂತರಕ್ಕೆ ಮತ್ತೊಮ್ಮೆ ಸೂಚನೆ ನೀಡಲಾಗುವುದು ಅಂತ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳ ಹೇಳ್ತಿದ್ದಾರೆ. ಇದು ವರ್ತಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮೂಲಭೂತ ಸೌಕರ್ಯಗಳನ್ನ ಒದಗಿಸದೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ದಾಸನಪುರಕ್ಕೆ ಶಿಫ್ಟ್ ಆದರೆ ಪಾರ್ಕಿಂಗ್ ಸಮಸ್ಯೆ, ರೈತರಿಗೆ ತೊಂದರೆ ಆಗುತ್ತೆ. ಸ್ಥಳಾಂತರಕ್ಕೆ ವಿರುದ್ಧವಾಗಿ 300ಕ್ಕೂ ಅಧಿಕ ಆಕ್ಷೇಪಣೆಗಳು ಬಂದಿವೆ. ಸರ್ಕಾರದ ನಡೆ ಖಂಡಿಸಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಕೂಡಲೇ ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡುವುದಾಗಿ ವರ್ತಕರ ಸಂಘ ಎಚ್ಚರಿಕೆ ನೀಡಿದೆ.