ಶಾಕಿಂಗ್ : ಭಾರತಕ್ಕೂ ಲಗ್ಗೆಯ ಆತಂಕ!

ಗುರುವಾರ, 24 ಮಾರ್ಚ್ 2022 (10:04 IST)
ನವದೆಹಲಿ : ಒಮಿಕ್ರೋನ್ ಹಾವಳಿ ಕಡಿಮೆಯಾಯ್ತು, ಇನ್ನೇನು 4ನೇ ಅಲೆ ಭೀತಿ ಇಲ್ಲ ಅನ್ನುವ ಹಂತದಲ್ಲೇ,
 
ಹೊಸ ರೀತಿಯ ಕೋವಿಡ್ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಬರುವ ಸಾಧ್ಯತೆಯಿದೆಯೇ ಹೊರತು ಒಮಿಕ್ರೋನ್ನಿಂದ ಹೊಸ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೂಡ ಕೊರೋನಾ ವೈರಸ್ನ ಬೇರೆ ಬೇರೆ ರೂಪಾಂತರಿಗಳ ಮಿಶ್ರ ತಳಿಯ ಮೇಲೆ ನಿಗಾ ವಹಿಸಿದೆ.

ಜಗತ್ತಿನಾದ್ಯಂತ ಈಗ ಕೋವಿಡ್ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆ ಪೈಕಿ ಅಮೆರಿಕ ಮತ್ತು ಇಸ್ರೇಲ್ನಲ್ಲಿ ಡೆಲ್ಟಾಹಾಗೂ ಒಮಿಕ್ರೋನ್ ರೂಪಾಂತರಿಗಳ ಮಿಶ್ರ ತಳಿ ಪತ್ತೆಯಾಗಿದೆ.

ಭಾರತದಲ್ಲಿ ಒಮಿಕ್ರೋನ್-ಡೆಲ್ಟಾರೂಪಾಂತರಿಗಳ ಮಿಶ್ರ ತಳಿ ಇನ್ನೂ ಪತ್ತೆಯಾಗಿಲ್ಲ. ಆದರೆ ಅಂತಹ ಮಿಶ್ರ ತಳಿಗಳ ಮೇಲೆ ಕಣ್ಣಿಡಬೇಕು. ಸದ್ಯ ದೇಶದಲ್ಲಿರುವ ಕೊರೋನಾ ಸೋಂಕಿನ ಶೇ.98ರಷ್ಟುಪಾಲು ಬಿಎ.2 ಒಮಿಕ್ರೋನ್ ತಳಿಯದ್ದಾಗಿದೆ. ಇನ್ನುಳಿದ ಪಾಲು ಬಿಎ.1 ಒಮಿಕ್ರೋನ್ ಆಗಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ