ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಮಿಂಚಿದ ಯಸ್ತಿಕಾ ಭಾಟಿಯಾ, ಶಫಾಲಿ ವರ್ಮ
ಭಾರತದ ಆರಂಭ ಉತ್ತಮವಾಗಿಯೇ ಇತ್ತು. ಸ್ಮೃತಿ ಮಂಥನಾ 30, ಶಫಾಲಿ ವರ್ಮ 42 ರನ್ ಗಳಿಸಿ ಮಿಂಚಿದರು. ಬಳಿಕ ಯಸ್ತಿಕಾ ಭಾಟಿಯಾ 50 ರನ್ ಗಳಿಸಿ ಮಿಂಚಿದರು. ಆದರೆ ನಾಯಕಿ ಮಿಥಾಲಿ ರಾಜ್ ಶೂನ್ಯಕ್ಕೆ ನಿರ್ಗಮಿಸಿದರೆ, ಹರ್ಮನ್ ಪ್ರೀತ್ ಕೌರ್ 14 ರನ್ ಗೇ ವಿಕೆಟ್ ಒಪ್ಪಿಸಿದರು.
ಕೆಳ ಕ್ರಮಾಂಕದಲ್ಲಿ ಪೂಜಾ ವಸ್ತ್ರಾಕರ್ ಅಜೇಯ 30 ರನ್ ಗಳಿಸಿದರು. ಅಂತಿಮವಾಗಿ ಭಾರತ, ಬಾಂಗ್ಲಾಗೆ 230 ರನ್ ಗಳ ಗುರಿ ನಿಗದಿಪಡಿಸಿತು.